ರಾಜ್ಯದಲ್ಲಿನ ಲಿಂಗಾನುಪಾತ ಸಮತೋಲನ ಮತ್ತು ಹೆಣ್ಣುಮಕ್ಕಳ ಶಿಕ್ಷಣ, ಸಬಲೀಕರಣಕ್ಕೆ ನೆರವಾಗಲೆಂದು 2006-07 ರ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ಭಾಗ್ಯ ಲಕ್ಷ್ಮೀ' ಬಾಂಡ್ ಎಂಬ ಯೋಜನೆಯನ್ನು 'ಭಾರತೀಯ ಜೀವ ವಿಮಾ ನಿಗಮ' (ಎಲ್ ಐ ಸಿ) ದ ಮೂಲಕ ಜಾರಿಗೊಳಿಸಿದ್ದರು.
ಈ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಏಲ್) ಕುಟುಂಬದ ಗರಿಷ್ಟ ಎರಡು ಹೆಣ್ಣುಮಕ್ಕಳಿಗೆ 'ಭಾಗ್ಯ ಲಕ್ಷ್ಮೀ' ಬಾಂಡ್ ನೀಡುವ ಮೂಲಕ ಆ ಹೆಣ್ಣುಮಕ್ಕಳು 18 ವರ್ಷ ತುಂಬಿದಾಗ 1 ಲಕ್ಷ. ರೂಪಾಯಿ ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆಚ್ಚಿನ ಯೋಜನೆಯಾದ ‘ಭಾಗ್ಯಲಕ್ಷ್ಮಿ’ ಬಾಂಡ್ ಯೋಜನೆಯನ್ನು ಈಗ ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಮೂಲಕ ಮುಂದುವರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.
ಇನ್ನು ಮುಂದೆ ಈ ಯೋಜನೆಗೆ ಎಲ್‌ಐಸಿ ಬದಲು ಅಂಚೆ ಇಲಾಖೆ ಏಜೆನ್ಸಿಯಾಗಿರುತ್ತದೆ.
ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿ ಮಾಡುವುದರಿಂದ ಫಲಾನುಭವಿಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಸರ್ಕಾರದ ಭರವಸೆಯಂತೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ₹1 ಲಕ್ಷ ಸಿಗುತ್ತದೆ. ಭಾರತೀಯ ಜೀವ ವಿಮಾ ನಿಗಮವು ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್ ಮುಚ್ಯುರಿಟಿ ಆದ ಬಳಿಕ ₹1 ಲಕ್ಷ ಪಾವತಿ ಮಾಡಲು ತಕರಾರು ಮಾಡುತ್ತಲೇ ಇತ್ತು.
ಭಾಗ್ಯಲಕ್ಷ್ಮಿ ಯೋಜನೆಯನ್ನು 'ಸುಕನ್ಯ ಸಮೃದ್ಧಿ' ಗೆ ವರ್ಗಾಯಿಸಲಾಗಿದೆ ಜೀವ ವಿಮಾ ನಿಗಮದ ಬೇಡಿಕೆ ಈಡೇರಿಸಲು ಹೊರಟರೆ ರಾಜ್ಯ ಸರ್ಕಾರ ವಾರ್ಷಿಕ ₹2,000 ಕೋಟಿ ಗೂ ಹೆಚ್ಚು ಹಣ ತುಂಬಿ ಕೊಡಬೇಕಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಅನಗತ್ಯ ಹೊರೆ ಆಗುತ್ತಿತ್ತು. ಆದ್ದರಿಂದ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಅಂಚೆ ಇಲಾಖೆಗೆ ನೀಡುವುದೆಂದರೆ ಏಜೆನ್ಸಿ ಬದಲಾವಣೆ ಮಾಡಿದಂತೆ. ಫಲಾನುಭವಿಗಳಿಗೆ ₹1 ಲಕ್ಷ ಸಿಗುತ್ತದೆ, ಅಲ್ಲದೇ ಹೆಣ್ಣುಮಗುವಿನ ಪೋಷಕರೂ ಕೂಡ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ತಮ್ಮ ಶಕ್ತಾನುಸಾರ ಹೂಡಿಕೆ ಮಾಡಬಹುದಾಗಿದ್ದು, 1 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕ ಉಳಿತಾಯ ಖಾತೆಯ(Senior Citizen Savings Account) ನಂತರ ಅತೀ ಹೆಚ್ಚಿನ ಬಡ್ಡಿ ನೀಡುವ ಖಾತೆ ಎಂದರೆ ಅದು 'ಸುಕನ್ಯಾ ಸಮೃದ್ಧಿ ಖಾತೆ'
ಕಾಮೆಂಟ್ ಪೋಸ್ಟ್ ಮಾಡಿ