ಕರ್ನಾಟಕ ಅಂಚೆ ವೃತ್ತವು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ "ಗುರು ವಂದನೆ" ಎಂಬ ಆನ್ಲೈನ್ ಅಪ್ಲಿಕೇಶನ್ ಮೂಲಕ ನಿಮ್ಮ ನೆಚ್ಚಿನ ಗುರುಗಳಿಗೆ ಶುಭಾಶಯ ಸಂದೇಶದೊಂದಿಗೆ ಕಿರು ಕಾಣಿಕೆಯನ್ನು ಕಳುಹಿಸಬಹುದಾಗಿದೆ.
ನೆಚ್ಚಿನ ಶಿಕ್ಷಕರಿಗೆ ಮನೆಯಿಂದಲೇ 'ಗುರು ವಂದನೆ' ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ.
ಹಂತ 1: ಆನ್ಲೈನ್ ಹಣ ಪಾವತಿ
ಈ ಕೆಳಗೆ ನೀಡಿದ ಚೀಫ್ ಪೋಸ್ಟ ಮಾಸ್ಟರ್ ಖಾತೆಗೆ ಕೇವಲ 100/- ರೂಪಾಯಿಗಳನ್ನು ಗೂಗಲ್ ಪೇ/ಫೋನ್ ಪೇ/ ನೆಫ್ಟ/ ಐ ಎಮ್ ಪಿ ಎಸ್ ಮೂಲಕ ಪಾವತಿಸಿ, ವಿವರಗಳನ್ನು (Transation particulers like UTR No etc) ಬರೆದಿಟ್ಟುಕೊಳ್ಳಿ.ಹಂತ 2 : ಆನ್ಲೈನ್ ಅರ್ಜಿ ಭರ್ತಿ ಮಾಡಿ
👉karnatakapost.gov.in ವೆಬ್ಸೈಟ್ ಗೆ ಭೇಟಿ ನೀಡಿ ಸೈಡ್ ಬಾರ್ನಲ್ಲಿ ಇರುವ 'ಗುರುವಂದನ' ಲಿಂಕ್ ಕ್ಲಿಕ್ ಮಾಡಿದಲ್ಲಿ ಆನ್ಲೈನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಈಗಾಗಲೇ ಪಾವತಿಸಿದ ಹಣದ ವರ್ಗಾವಣೆಯ ವಿವರ ನಮೂದಿಸಿ.
👉ಪೆನ್ಸಿಲ್ , ಫೇಸ್ ಮಾಸ್ಕ, ಫಿಲಾಟಲಿ ಬುಕ್ ಮಾರ್ಕ, ಈ ಮೂರರಲ್ಲಿ ಯಾವುದಾದರೊಂದು ಕಾಣಿಕೆ (ಗಿಫ್ಟ) ಆಯ್ಕೆ ಮಾಡಿ.
👉ನಿಮ್ಮ ಸ್ವತಃ ರಚನೆಯ ಶುಭಾಶಯ ಸಂದೇಶ ಬರೆದು ಕಳುಹಿಸಬಹುದು ಆಥವಾ ಈಗಾಗಲೇ ಇರುವ ಮೂರರಲ್ಲಿ ಒಂದು ಸಂದೇಶ ಆಯ್ಕೆ ಮಾಡಿ
👉ಕಳುಹಿಸುವವರ ವಿವರವಾದ ವಿಳಾಸ, ಪಿನ್ ಕೋಡ್ ಹಾಗೂ ಮೊಬೈಲ್ ನಂಬರ್ ಸಹಿತ ಕಡ್ಡಾಯವಾಗಿ ನಮೂದಿಸಿ.
👉ನೀವು ಕಳುಹಿಸಲು ಬಯಸುವ ನಿಮ್ಮ ಗುರುಗಳ (ಸ್ವೀಕರಿಸುವವರ) ಸಂಪೂರ್ಣ ವಿಳಾಸ (ಪಿನ್ ಕೋಡ್ ಕಡ್ಡಾಯವಾಗಿ) ನಮೂದಿಸಿ, ಸಬ್ಮಿಟ್ ಮಾಡಿದಲ್ಲಿ ನಿಮ್ಮ ಗುರುಗಳಿಗೆ ಶಿಕ್ಷಕರ ದಿನದಂದು ನಿಮ್ಮ ಸಂದೇಶದೊಂದಿಗೆ ಉಡುಗೊರೆಯನ್ನೂ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುತ್ತದೆ.
ಸಂದೇಶ, ವಿಳಾಸ ಮುದ್ರಣ ಮಾಡಿ ಉಡುಗೊರೆ ಯೊಂದಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸುವ ಕಾರ್ಯವನ್ನು ಅಂಚೆ ಇಲಾಖೆಯೇ ಮಾಡಲಿದೆ.
ಗಮನಿಸಬೇಕಾದ ಅಂಶಗಳು
- ಈ ಸೌಲಭ್ಯ ಸಪ್ಟೆಂಬರ 2 ರವರೆಗೆ ಮಾತ್ರ ತೆರೆದಿರುತ್ತದೆ.
- ಕಳುಹಿಸುವವರ ಹಾಗೂ ಸ್ವೀಕರಿಸುವವರ ವಿಳಾಸ ಭಾರತೀಯರದಾಗಿರಬೇಕು.
ನೆಚ್ಚಿನವರಿಂದ ಅಂಚೆ ಮೂಲಕ ಸ್ವೀಕರಿಸಿದ ಶುಭಾಶಯದ ಗ್ರೀಟಿಂಗ್ ಕಾರ್ಡ್ ನೀಡುವ ಖುಷಿಯನ್ನು ಯಾವುದೇ ವಾಟ್ಸಪ್, ಫೇಸ್ ಬುಕ್ ಸ್ಟೇಟಸ್ ನೀಡಲಾರದು. ಆದ್ದರಿಂದಲೇ ಇಂದೇ ಅಂಚೆ ಮೂಲಕ 'ಗುರು ವಂದನೆ' ಸಲ್ಲಿಸಿ.
ಕಾಮೆಂಟ್ ಪೋಸ್ಟ್ ಮಾಡಿ