Slogun
(ಸ್ಲೋಗನ್ ) : " ಆಪ್ಕಾ ಬ್ಯಾಂಕ್, ಆಪ್ಕೆ ದ್ವಾರ್"-
ಮನೆಮನೆಗೂ ತಮ್ಮ ಬ್ಯಾಂಕ್.

ಪ್ರಾರಂಭವಾದ ದಿನಾಂಕ: 01/09/2018  ರಂದು  ಭಾರತದ ಪ್ರಧಾನ ಮಂತ್ರಿಗಳಾದ  ಸನ್ಮಾನ್ಯ ಶ್ರೀ  ನರೇಂದ್ರ ಮೋದಿ ಅವರಿಂದ  ಉದ್ಘಾಟನೆಯಾಗಿದೆ.
Prime Minister Sri.Narendra Modi Addressing on Launch of IPPB

ಐಪಿಪಿಬಿ ಕೇಂದ್ರ ಕಚೇರಿನವದೆಹಲಿ, ಭಾರತ 

ಐಪಿಪಿಬಿ ಸಿಇಓ & ಎಂಡಿ:   ಸುರೇಶ್ ಸೇಥಿ
IPPB MD & CEO- Sri Suresh Sethi

      ಇಂಡಿಯ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ - ಭಾರತೀಯ ಅಂಚೆ ಇಲಾಖೆ ಈ ಬ್ಯಾಂಕಿನ ಪ್ರವರ್ತಕ.  ಇಂದು ಐಪಿಪಿಬಿಯು ಭಾರತದ ಅತಿದೊಡ್ಡ ಪೇಮೆಂಟ್ಸ್ ಬ್ಯಾಂಕಿಂಗ್ ವ್ಯವಸ್ಥೆ ಎನಿಸಿಕೊಂಡಿದೆ. ಇದು ಪ್ರಸ್ತುತ ಇರುವ ಬ್ಯಾಂಕ್‌ಗಳ ವ್ಯಾಪ್ತಿಗಿಂತಲೂ 2.5 ರಷ್ಟು ಹೆಚ್ಚಿನ ವ್ಯಾಪ್ತಿಯನ್ನು ತಲುಪಿದೆ. ಆ ಮೂಲಕ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಬ್ಯಾಂಕಿಂಗ್ ಸೇವೆಯನ್ನು ಐಪಿಪಿಬಿಯು ಕಲ್ಪಿಸುತ್ತಿದೆ.

      ದೇಶದ ಪ್ರತಿ ವ್ಯಕ್ತಿಯೂ ಬ್ಯಾಂಕಿಂಗ್ ವ್ಯವಸ್ಥೆಯ ಲಾಭ ಪಡೆದುಕೊಳ್ಳಬೇಕೆಂಬ ಗುರಿಯೊಂದಿಗೆ ಐಪಿಪಿಬಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಬ್ಯಾಂಕ್‌ ಸೇವೆಯು ಗ್ರಾಹಕನ ಮನೆ ಬಾಗಿಲಿಗೆ ಬರಲಿದೆ.

ಐಪಿಪಿಬಿ ಖಾತೆಯ ಪ್ರಮುಖ ಅಂಶಗಳು

ಡಿಜಿಟಲ್ ಖಾತೆ: ಇದೊಂದು ನೂತನ ತಂತ್ರಜ್ಞಾನ ಆಧಾರಿತ ಖಾತೆಯಾಗಿದ್ದು, ಕಾಗದ ರಹಿತವಾಗಿದೆ. 

👉ಖಾತೆ ತೆರೆಯಲು ಯಾವುದ ಅರ್ಜಿ ಫಾರ್ಮ್ ತುಂಬುವ  ಅಗತ್ಯವಿಲ್ಲ, ಗುರುತಿನ  ಚೀಟಿಯ ಝರಾಕ್ಸ ಪ್ರತಿ, ಫೋಟೋ ನೀಡಬೇಕಾಗಿಲ್ಲ. ಕೇವಲ ಆಧಾರ ಸಂಖ್ಯೆ, ಮೊಬೈಲ್  ಸಂಖ್ಯೆ ನೀಡಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯಬಹುದು.

👉ದೈನಂದಿನ ವ್ಯವಹಾರದಲ್ಲಿ ಕೂಡ ಯಾವುದೇ ತರದ ಅರ್ಜಿ  ತುಂಬುವ ಅಗತ್ಯವಿಲ್ಲ ಕಾಗದರಹಿತ ರವಾಗಿ ವಿವರಿಸಬಹುದು.

👉ಪ್ರತಿ   ವ್ಯವಹಾರಕ್ಕೆ ಎಸ್ಎಂಎಸ್ ಬರುವುದರಿಂದ ವ್ಯವಹಾರ ಖಚಿತ ಮತ್ತು ಸುರಕ್ಷಿತ.  ಪ್ಲೇಸ್ಟೋರ್ ನಿಂದ ಐಪಿಪಿಬಿ ಆಪನ್ನು ಡೌನ್ಲೋಡ್ ಮಾಡಿಕೊಂಡು  ಮನೆಯಲ್ಲಿ ಕುಳಿತು Digital ಖಾತೆಯನ್ನು ನೀವೇ   ತೆರೆಯಬಹುದು,  ಹೀಗೆ ನೀವೇ ತರದ Digital ಖಾತೆಯನ್ನು  ಒಂದು ವರ್ಷದ ಒಳಗಾಗಿ e-KYC  ಮಾಡಿಸಬೇಕಾದ ಅವಶ್ಯಕತೆ ಇದ್ದು,  ನಿಮ್ಮ ಸಮೀಪದ ಯಾವುದೇ  ಅಂಚೆ ಕಚೇರಿಗೆ  ತೆರಳಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು. 

👉 ಖಾತೆ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ ನಿಮಗೆ ಕೊಟ್ಟಿರುವ ಕ್ಯೂಆರ್ ಕಾರ್ಡ್ (QR Card) ಎಲ್ಲಾ ಮಾಹಿತಿಯನ್ನು ನೀಡುತ್ತದೆ.  ಒಂದುವೇಳೆ ಕ್ಯೂಆರ್ ಕಾರ್ಡ್ ಕಳೆದು ಹೋದರೂ ನಿಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯಿಂದ ವ್ಯವಹಾರವನ್ನು ಮಾಡಬಹುದು, ಖಾತೆಯನ್ನು ಮುಂದುವರೆಸಿಕೊಂಡು ಹೋಗಬಹುದು.

1.55 ಲಕ್ಷ ಪೋಸ್ಟ್‌ ಆಫೀಸ್‌ಗಳಿಂದ ಬ್ಯಾಂಕಿಂಗ್ ಸೇವೆ:

       ವಿಶ್ವದ ಅತಿ ದೊಡ್ಡ ಅಂಚೆ ಜಾಲ ವಾದ  ಭಾರತೀಯ ಅಂಚೆ ಇಲಾಖೆಯ 1.55 ಲಕ್ಷ ಪೋಸ್ಟ್‌ ಆಫೀಸ್‌ಗಳು ಐಪಿಪಿಬಿ ಬ್ಯಾಂಕಿಂಗ್ ಸೇವೆಯನ್ನು ಕೊಡಲಿವೆ. ಎಲ್ಲಾ ಅಂಚೆ ಕಚೇರಿಗಳನ್ನು ಒಂದೇ ಸೂರಿನಡಿ ಸಂಪರ್ಕಕ್ಕೆ ತರಲಾಗಿದೆ. 3 ಲಕ್ಷ ಅಂಚೆ ನೌಕರರು ಮತ್ತು ಗ್ರಾಮೀಣ ಡಾಕ್ ಸೇವಕ್‌ ರರು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಮನೆಗೆ ತಲುಪಿಸುತ್ತಿದ್ದಾರೆ.

ಮನೆಯ ಬಾಗಿಲಿಗೆ ಸೇವೆ: 

      ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣಂದಿರ ಕೈಗೆ ಠೇವಣಿ ಹಣ ಕಟ್ಟಿ ರಶೀದಿ ಪಡೆಯಬಹುದಾಗಿದೆ. ಪೋಸ್ಟ್‌ಮನ್‌ಗಳು ತರುವ ಡಿಜಿಟಲ್ ಪ್ಯಾಡ್‌ನಲ್ಲಿ ನಿಮ್ಮ ಬೆರಳಚ್ಚು ಒತ್ತಿ ಹಣವನ್ನು ಡ್ರಾ ಸಹ ಮಾಡಬಹುದು. ಬೇರೆಯವರಿಗೆ ಹಣ ಕಳುಹಿಸಲು ಕೂಡಾ ಇದೇ ಮಾದರಿ ಅನುಸರಿಸಬೇಕು. ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನೇ ನಿಮ್ಮ ಬ್ಯಾಂಕ್‌ ಆಗಲಿದ್ದಾನೆ.  ಪೋಸ್ಟ್ ಮ್ಯಾನ್ ಈಗ ನಡೆದಾಡುವ ಬ್ಯಾಂಕ್  ಹಾಗೂ ಹಣಕಾಸಿನ   ಸಾಕ್ಷರತೆಯ ಪ್ರತಿನಿಧಿ ಹಾಗೂ ಸಲಹೆಗಾರನಾಗಿ ಕೆಲಸ ಮಾಡುತ್ತಾನೆ.

ಆರ್‌ಬಿಐ ನಿಯಮಗಳಿಗೆ ಬದ್ಧ:

     ಶೇ.100 ಸರ್ಕಾರಿ ಸ್ವಾಮ್ಯದ ಶೇರುಗಳೇ ಇರುವ, ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಯು ಶೇರುದಾರರಿಲ್ಲದ ಐಪಿಪಿಬಿಯು ಭಾರತೀಯ ಅಂಚೆ ಇಲಾಖೆ ಮತ್ತು ಪ್ರಸಾರ ಮತ್ತು ಸಂವಹನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಐಪಿಪಿಬಿಯು ಆರ್‌ಬಿಐ ನಿಯಮಗಳ ಅನ್ವಯ ಕಾರ್ಯನಿರ್ವಹಿಸುತ್ತದೆ. 

ಗರಿಷ್ಟ ಒಂದು ಲಕ್ಷ  ಠೇವಣಿ:

       ಪೇಮೆಂಟ್‌ ಬ್ಯಾಂಕ್‌ಗಳು ಒಂದು ಲಕ್ಷದ ವರೆಗೆ ಠೇವಣಿಯನ್ನು ಸ್ವೀಕರಿಸುತ್ತವೆ. ಉಳಿತಾಯ ಖಾತೆಗೆ 4% ಬಡ್ಡಿಯನ್ನು ಐಪಿಪಿಬಿ ಬ್ಯಾಂಕ್ ನೀಡುತ್ತಿದೆ. 


ಸಾಲ ನೀಡುವಂತಿಲ್ಲ: 

     ಆರ್‌ಬಿಐ ನಿಯಮಗಳ ಅನ್ವಯ ಪೇಮೆಂಟ್‌ ಬ್ಯಾಂಕ್‌ಗಳು ಸಾಲಗಳನ್ನೂ ನೀಡುವಂತಿಲ್ಲ. ಆದರೆ ಸಾಲವನ್ನು ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ ಸಹಕಾರದೊಂದಿಗೆ  ಐಪಿಪಿಬಿ ಸಾಲ ಪಾವತಿ,  ಮರುಪಾವತಿ ಸೌಲಭ್ಯ ನೀಡುತ್ತದೆ.

ಹಲವು ಬ್ಯಾಂಕಿಂಗ್ ಸೌಲಭ್ಯ ಲಭ್ಯ.  

      ಐಪಿಪಿಬಿಯಲ್ಲಿ ಉಳಿತಾಯ ಖಾತೆ (Savings Account), ಠೇವಣಿ (FD), ಹಣ ವರ್ಗಾವಣೆ Money Transfer), ಚಾಲ್ತಿ ಖಾತೆ( Current Account), ಗ್ಯಾಸ್ ಸಬ್ಸಿಡಿಗಳು ಮೊದಲಾದ ನೇರ  ನಗದು ವರ್ಗಾವಣೆ (DBT), ಬಿಲ್ ಮತ್ತು ಯುಟಿಲಿಟಿ ಪಾವತಿಗಳು, ಬಿಲ್ ಪಾವತಿ,  ಮೊಬೈಲ್ ಮತ್ತು ಡಿಟಿಎಚ್ ರಿಚಾರ್ಜ್ ಮುಂತಾದ ಸೇವೆಗಳು ಲಭ್ಯವಿವೆ. ಐಪಿಪಿಬಿಯು ಎಸ್‌ಎಂಎಸ್‌, ಇ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನೂ ನೀಡುತ್ತದೆ.

ಅಂಚೆ ಉಳಿತಾಯ ಖಾತೆ ಯೊಂದಿಗೆ ಜೋಡಣೆ:    

     ಈಗಾಗಲೇ ಚಾಲ್ತಿಯಲ್ಲಿರುವ 17.5 ಕೋಟಿ ಅಂಚೆ ಉಳಿತಾಯ ಖಾತೆಗಳನ್ನು ಐಪಿಪಿಬಿ ಲಿಂಕ್ ಮಾಡಿಕೊಳ್ಳಲಿದೆ. ಜೊತೆಗೆ ಹಲವು ಹೊಸ ಖಾತೆಗಳನ್ನು ತೆರೆಯಲಿದೆ. ಮೂರು ಲಕ್ಷ ಅಂಚೆಅಣ್ಣಂದಿರು ಮನೆ ಬಾಗಿಲಿಗೆ ತೆರಳಿ ಬ್ಯಾಂಕಿಂಗ್ ಸೇವೆ ನೀಡಲಿದ್ದಾರೆ.

   ಅಂಚೆ ಕಚೇರಿಯಲ್ಲಿನ ಅಂಚೆ  ಉಳಿತಾಯ  ಖಾತೆಯೊಂದಿಗೆ  ಐಪಿಪಿಬಿ ಜೋಡಣೆ  ಮಾಡಿಕೊಂಡಲ್ಲಿ,  ಉಳಿತಾಯ ಯೋಜನೆಗಳಾದ ಪಿಪಿಎಫ್ ಖಾತೆ,  ಆರ್ ಡಿ ಖಾತೆ,   ಆರ್ ಡಿ ಖಾತೆಯ ಸಾಲ ಮರುಪಾವತಿ,  ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಜಮಾ ಮಾಡಬಹುದಾಗಿದೆ.


ನೇರ ನಗದು ವರ್ಗಾವಣೆ ಸೌಲಭ್ಯದ ಪ್ರಯೋಜನ

    ಐಪಿಪಿಬಿ ಖಾತೆ ಆಧಾರ ಕಾರ್ಡ್ ಮಾಹಿತಿ ಆಧರಿಸಿ ತೆರೆಯುವುದರಿಂದಾಗಿ ಸಹಜವಾಗಿಯೇ ಆಧಾರ ಕಾರ್ಡ್ ನೊಂದಿಗೆ ಜೋಡಣೆ (Aadhar Link) ಹೊಂದಿರುತ್ತದೆ, ಆದ್ದರಿಂದ ಸರ್ಕಾರದಿಂದ ದೊರೆಯುವ ನೇರ ನಗದು ವರ್ಗಾವಣೆ (DBT-Direct Beneficiary Transfer) ಸೌಲಭ್ಯಗಳಾದ ಗ್ಯಾಸ್ ಸಬ್ಸಿಡಿ, ವೃದಾಪ್ಯ ವೇತನ, ವಿಧವಾ ವೇತನ, ಅಂಗ ವಿಕಲರ ವೇತನ ಅಲ್ಲದೇ ಶಾಲಾ ಹಾಗೂ ಕಾಲೇಜ್ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ವೇತನವನ್ನು (Schoolarship)   ಕೂಡ ಪಡೆದುಕೊಳ್ಳಬಹುದು. 

      ಬ್ಯಾಂಕ್ ಖಾತೆಗಳಲ್ಲಿ  1000-2000 ರೂ.ಗಳ  ಕನಿಷ್ಠ ಮೊತ್ತವನ್ನು ಇಡಲೇಬೇಕು, ಇಲ್ಲದಿದ್ದರೆ ದಂಡ ವಿಧಿಸಿ ಖಾತೆ ನಿಷ್ಕ್ರೀಯಗೊಳಿಸಲಾಗುತ್ತದೆ. ಆದರೆ ಐಪಿಪಿಬಿ ಖಾತೆಯಲ್ಲಿ ಕೇವಲ 100 ರೂ.ಗಳ ಕನಿಷ್ಠ ಮೊತ್ತದಿಂದಲೂ ನಿರ್ವಹಿಸಬಹುದು.

ನೂತನ AePS ಸೇವೆ ಲಭ್ಯ

      ಸೆಪ್ಟಂಬರ್ 1, 2019 ರಂದು ಮೊದಲ ವರ್ಷಾಚರಣೆಗೆ AePS (Aadhar Enabled Payment System) ಸೌಲಭ್ಯವನ್ನು ಅಳವಡಿಸಿಕೊಂಡ ಐಪಿಪಿಬಿ ತನ್ನಲ್ಲ ಶಾಖೆಗಳಲ್ಲಿ  ಈ ಸೌಲಭ್ಯ ಒದಗಿಸಿದೆ.

       AePS  ಸೇವೆಯಲ್ಲಿ ಯಾವುದೇ ಬ್ಯಾಂಕಿನ   ಆಧಾರ್ ಜೋಡಣೆಯಾದ ಖಾತೆಯಲ್ಲಿನ   ಹಣವನ್ನು ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನ ಮೂಲಕ ಅಥವಾ ಅಂಚೆ ಕಛೇರಿಯ ಯಾವುದೇ ಶಾಖೆಯಲ್ಲಿ    ಪಡೆಯಬಹುದು.  ಈ ಮೂಲಕ  'Aap Ka Bank, Aap Ke Dwar' ಎಂಬ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕಿನ ಧ್ಯೇಯ ವಾಕ್ಯ ಸಾಕಾರ ಗೊಂಡಿದೆ.  ಅದಲ್ಲದೆ  'ಡಿಜಿಟಲ್ ಇಂಡಿಯಾ' ದ  ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ.

       ಇಂದೇ ಪ್ಲೇಸ್ಟೋರ್ ನಿಂದ  IPPB App   ಡೌನ್ಲೋಡ್ ಮಾಡಿಕೊಂಡು   ಅಥವಾ ಅಂಚೆ ಕಚೇರಿಯನ್ನು  ಸಂಪರ್ಕಿಸಿ ಅಥವಾ ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನನ್ನು ಸಂಪರ್ಕಿಸಿ ಖಾತೆಯನ್ನು ತೆರೆಯಿರಿ.


Quote by Prime Minister about IPPB on Occasion Independence Day

Post a Comment

ನವೀನ ಹಳೆಯದು