ಡಾಕ್ ಪೇ (DakPay) |
ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಹೊಸ ಡಿಜಿಟಲ್ ಪಾವತಿ ಆ್ಯಪ್ 'ಡಾಕ್‌ಪೇ' ಅನಾವರಣಗೊಳಿಸಿವೆ.
ಭಾರತದಾದ್ಯಂತ ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಹಣ ವರ್ಗಾವಣೆ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ, ಖರೀದಿ ಹಾಗೂ ಸೇವೆಗಳಲ್ಲಿ ವರ್ಚುವಲ್ ಡೆಬಿಟ್ ಕಾರ್ಡ್ ಮತ್ತು ಯುಪಿಐ ಬಳಸಿ ಪಾವತಿಸುವುದು, ಯಾವುದೇ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಹಾಗೂ ಬಿಲ್ ಪಾವತಿ ಸೇವೆಗಳು ಈ ಆ್ಯಪ್ ಮೂಲಕ ಸಿಗಲಿದೆ.
ಪ್ರಸ್ತುತ ಆ್ಯಂಡ್ರಾಯ್ಡ್ ವೇದಿಕೆಯಲ್ಲಿ ಅಪ್ಲಿಕೇಷನ್ ಲಭ್ಯವಿದ್ದು, ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಅಂಚೆ ಇಲಾಖೆ ಟ್ವೀಟಿಸಿದೆ.
ಕೇಂದ್ರ ದೂರಸಂಪರ್ಕ ಮತ್ತು ಐಟಿ ಸಚಿವರಾದ ಶ್ರೀ ರವಿ ಶಂಕರ್ ಪ್ರಸಾದ್ 'ಡಾಕ್‌ಪೇ' ಬಿಡುಗಡೆ ಮಾಡಿದರು.
ಕಾಮೆಂಟ್ ಪೋಸ್ಟ್ ಮಾಡಿ