SSLC ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ..!
ದೇಶಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಅಂಚೆ ಸೇವಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಇಲಾಖೆ ಅಧಿಸೂಚನೆ ಪ್ರಕಟಿಸಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (Branch Post Master-BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್( Assistant Branch Post Master-ABPM) ಮತ್ತು ಗ್ರಾಮೀಣ ಡಾಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ-Grameen Dak Sevak-GDS) ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಕರ್ನಾಟಕ ವೃತ್ತದಲ್ಲಿ ಒಟ್ಟು 2,637 ಹುದ್ದೆಗಳಿಗೆ ನೇಮಕ ನಡೆಯಲಿದೆ. ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನಾಂಕವಾಗಿದೆ .
ಹುದ್ದೆಗಳು ಮತ್ತು ಮೀಸಲಾತಿ ವಿವರ
ಶೈಕ್ಷಣಿಕ ಅರ್ಹತೆ:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಎಸ್‌ಎಸ್‌ಎಲ್‌ಸಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ಭಾಷೆಯನ್ನು ಒಂದು ವಿಷಯನ್ನಾಗಿ ಅಧ್ಯಯನ ಮಾಡಿರುವುದು ಕಡ್ಡಾಯ.
- ಅಭ್ಯರ್ಥಿಗಳು ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಅಂದರೆ ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ವ್ಯಾಸಂಗ ಮಾಡಿರಬೇಕು
- 60 ದಿನಗಳ ಕಂಪ್ಯೂಟರ್ ಟ್ರೇನಿಂಗ್ ಕೋರ್ಸ್ ಸರ್ಟಿಫಿಕೇಟ್ ಪಡೆದಿರಬೇಕು. ಒಂದು ವೇಳೆ ಕಂಪ್ಯೂಟರ್ ಅನ್ನು ಒಂದು ವಿಷಯವಾಗಿ ಓದಿದ್ದರೆ ಈ ಸರ್ಟಿಫಿಕೇಟ್‌ನ ಅವಶ್ಯಕತೆ ಇರುವುದಿಲ್ಲ.
- ಅಭ್ಯರ್ಥಿಗಳು ಸೈಕಲ್ ಸವಾರಿ ಮಾಡುವುದನ್ನು ಕಡ್ಡಾಯವಾಗಿ ಕಲಿತಿರಬೇಕು ಅಥವಾ ದ್ವಿಚಕ್ರ ವಾಹನ ಚಾಲನೆ ತಿಳಿದಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯೋಮಿತಿ 40 ವರ್ಷ. ನಿಯಮಾನುಸಾರ ಮೀಸಲಾತಿ ವ್ಯಾಪ್ತಿಗೆ ಬರುವ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿರುತ್ತದೆ.
ಅರ್ಜಿ ಶುಲ್ಕ ವಿವರ :
ಸಾಮಾನ್ಯ, ಆರ್ಥಿಕ ದುರ್ಬಲ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು, ವಿಕಲಚೇತನ ಅಭ್ಯರ್ಥಿಗಳು ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ವೇತನ ವಿವರ :
ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ 12,000 ರಿಂದ 14, 500ರೂ. ಗಳವರೆಗೆ ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಂಚೆ ಸೇವಕ ಹುದೆಗಳಿಗೆ 10,000 ರಿಂದ 12,000ರೂ.ಗಳವರೆಗೆ ವೇತನ ನಿಗದಿಪಡಿಸಲಾಗಿರುತ್ತದೆ.
ನೇಮಕಾತಿ ವಿಧಾನ :
ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇಬ್ಬರೂ/ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಪಡೆದಿದ್ದಲ್ಲಿ ವಯೋಮಿತಿಯನ್ನು ಮಾನದಂಡವನ್ನಾಗಿ ಪರಿಗಣಿಸಿ ಹಿರಿತನದ ಆಧಾರದಲ್ಲಿ ಆಯ್ಕೆ ನಡೆಯುತ್ತದೆ. ಹೆಚ್ಚು ಓದಿದ್ದರೂ ಎಸ್‌ಎಸ್‌ಎಲ್‌ಸಿಯ ಅಂಕಗಳನ್ನಷ್ಟೇ ಪರಿಗಣಿಸಲಾಗುತ್ತದೆ. ನೇಮಕದ ಕುರಿತ ಮಾಹಿತಿಗಳನ್ನು ಎಸ್‌ಎಂಎಸ್ ಮೂಲಕ ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತದೆ.ಗಮನಿಸಬೇಕಾದ ಪ್ರಮುಖ ಅಂಶಗಳು:
- ಅರ್ಜಿ ಸಲ್ಲಿಸುವ ಮುನ್ನ ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಯಾವುದೇ ವೃತ್ತಕ್ಕೆ ಅರ್ಜಿ ಸಲ್ಲಿಸುವುದಾದರೂ ಅಭ್ಯರ್ಥಿಗಳು ಇದೇ ನೋಂದಣಿ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ನೋಂದಣಿ ಮಾಡಿಕೊಳ್ಳುವಾಗ ಮೊಬೈಲ್ ಸಂಖ್ಯೆ ನಮೂದಿಸುವುದು ಕಡ್ಡಾಯ.
- ಒಬ್ಬ ಅಭ್ಯರ್ಥಿಯು ಗರಿಷ್ಠ 20 ವೃತ್ತದಲ್ಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.
- ಶುಲ್ಕ ಪಾವತಿಸುವಾಗ ಪ್ರತಿ ಐದು ಆಯ್ಕೆಗಳಿಗೆ 100 ರೂ. ಶುಲ್ಕ(ಶುಲ್ಕ ವಿನಾಯ್ತಿ ಇರುವವರಿಗೆ ಅನ್ವಯವಾಗುವುದಿಲ್ಲ) ನಿಗದಿಪಡಿಸಲಾಗಿದೆ.
- ರಾಜ್ಯದ ಯಾವ ಜಿಲ್ಲೆಯಲ್ಲಿ, ಎಲ್ಲಿ ಎಷ್ಟು ಹುದ್ದೆ ಖಾಲಿ ಇದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಇದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಿ.
- ಆನ್ಲೈನ್ ಅಪ್ಲೈ ಮಾಡುವಲ್ಲಿ ತೊಂದರೆಗಳೇನಾದರೂ ಬಂದರೆ ಈ ಕೆಳಗಿನ ಲಿಂಕ್ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. http://www.appost.in/gdsonline/FAQ.html
- ಒಟ್ಟು ಹುದ್ದೆಗಳ ಸಂಖ್ಯೆ : 2,637
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 4, 2019
- ಸಹಾಯವಾಣಿ : 080- 22392554
- ವಿವರಗಳಿಗೆ ಮತ್ತು ಅರ್ಜಿ ಸಲ್ಲಿಸಲು: ವೆಬ್ ವಿಳಾಸ
ಈ ಲಿಂಕ್ ನ್ನು ನಿಮ್ಮ ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಳ್ಳಿ .
https://primepostkannada.blogspot.com/2019/08/sslc.html
ಕಾಮೆಂಟ್ ಪೋಸ್ಟ್ ಮಾಡಿ