ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಡಿ 80,000 ಖಾತೆಗಳನ್ನು ಎಲ್ ಐ ಸಿ ಯಿಂದ ಭಾರತೀಯ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ಅ.22 ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಾರ್ಷಿಕವಾಗಿ 1.5 ಲಕ್ಷ ಖಾತೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಿದೆ.

ಈ ಹಿಂದೆ ಈ ಯೋಜನೆಯನ್ನು 2006-2007 ರಿಂದ ಲೈಫ್ ಇನ್ಶ್ಯೂರೆನ್ಸ್ ಕಾರ್ಪೊರೇಷನ್(ಎಲ್ಐಸಿ)ಗೆ ವಹಿಸಲಾಗಿತ್ತು. ಆದರೆ ಅಂಚೆ ಇಲಾಖೆಗಿಂತಲೂ ಎಲ್ಐಸಿಯಲ್ಲಿ ಬಡ್ಡಿ ದರ ಕಡಿಮೆ ಇದ್ದ ಕಾರಣದಿಂದಾಗಿ ಈ ಯೋಜನೆಯನ್ನು ಅಂಚೆ ಇಲಾಖೆಗೆ ವಹಿಸಲಾಗಿದೆ.  ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯ. ಅಡಿಯಲ್ಲಿ ಈ ಖಾತೆಯನ್ನು ನಿರ್ವಹಿಸಲಾಗುತ್ತದೆ.

'ಸುಕನ್ಯಾ ಸಮೃದ್ಧಿ ಖಾತೆ' ಸಂಪೂರ್ಣ ಮಾಹಿತಿ ಓದಲು ಇಲ್ಲಿ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು