Sovereign Gold Bond |
RBI (ಆರ್ ಬಿ ಐ) ದೇಶದಲ್ಲಿ ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸಲು ಸಾರ್ವಭೌಮ ಚಿನ್ನದ ಬಾಂಡ್ SGB-(Sovereign Gold Bond ) ಎಂಬ ಹೊಸ ಹೂಡಿಕೆಯ ಅವಕಾಶವನ್ನು ನೀಡಿದೆ. ಆ ಮೂಲಕ ಹಳದಿ ಲೋಹದ ಆಮದು ಮಾಡಿಕೊಳ್ಳುವುದರಿಂದ ವಿದೇಶಕ್ಕೆ ಹೋಗುವ ಹಣವನ್ನು ಕಡಿವಾಣ ಹಾಕಲು ಕೇಂದ್ರೀಯ ಬ್ಯಾಂಕ್ ಚಿಂತನೆ ನಡೆಸಿದೆ.
ಏನಿದು ಸಾರ್ವಭೌಮ ಚಿನ್ನದ ಬಾಂಡ್ SGB-(Sovereign Gold Bond ) ?
Sovereign Gold Bond, RBI (Reserve Bank of India) ನ ಹೊಸದಾದ ಹೂಡಿಕೆಯ ವಿಧಾನ, ಇಲ್ಲಿ ಚಿನ್ನವನ್ನು ಭೌತಿಕ ರೂಪದಲ್ಲಿ ಖರೀದಿಸುವ ಬಯಲು ಅಷ್ಟೇ ಮೊತ್ತದ ಬಾಂಡ್ ಆರ್ ಬಿ ಐ ನೀಡುತ್ತದೆ. ಈ ಬಾಂಡ್ ಗಳನ್ನು 8 ವರ್ಷದ ಅವಧಿಯವರೆಗೆ ಹೂಡಿಕೆ ಮಾಡಿ ಅವಧಿಪೂರ್ಣಗೊಂಡ ನಂತರ ಅಥವಾ ನೀವು ಹಿಂತೆಗೆದುಕೊಳ್ಳುವ ದಿನದ ಚಿನ್ನದ ದರಕ್ಕೆ ಸಮನಾದ ಹಣವನ್ನು ವಾಪಸ್ ಪಡೆಯಬಹುದು.
ಹೂಡಿಕೆಯ ಅವಧಿ:
ಒಟ್ಟು 8 ವರ್ಷಗಳ ಅವಧಿಯ ಹೂಡಿಕೆಯಾಗಿದ್ದರೂ, ಕನಿಷ್ಟ 5 ವರ್ಷಗಳವರೆಗೆ ಹಣ ಹಿಂಪಡೆಯಲು ಅವಕಾಶವಿಲ್ಲ. ಐದು ವರ್ಷಗಳ ನಂತರ ಬಡ್ಡಿ ಪಾವತಿಯ ದಿನಾಂಕಗಳಂದು, ಅಂದಿನ ಚಿನ್ನದ ದರಕ್ಕೆ ಸಮನಾದ ಮೊತ್ತವನ್ನು ಪಡೆಯಬಹುದು.
ಚಿನ್ನದ ದರ :
ಒಂದು ಹಣಕಾಸು ವರ್ಷದಲ್ಲಿ ವಿವಿಧ ಅವಧಿಗಳಲ್ಲಿ(Tranche) ಗೋಲ್ಡ್ ಬಾಂಡ್ ನೀಡಲಾಗುತ್ತದೆ, ಆಯಾ ಅವಧಿಯ ಮೂರು ವಾರಗಳ ಸರಾಸರಿ ಬೆಲೆಯ ಮೇಲೆ ಐಬಿಜೆಎ( IBJA-India Bullion and Jewellers Association) ಚಿನ್ನದ ದರವನ್ನು ನಿರ್ಧರಿಸುತ್ತದೆ. ಒಂದು ಅವಧಿಯಲ್ಲಿನ 3-5 ದಿನಗಳವರೆಗೆ ಮಾತ್ರವೇ ಹೂಡಿಕೆಗೆ ಅವಕಾಶ ಇರುತ್ತದೆ.
ವಿವಿಧ ಸರಣಿ (Tranche) ಗಳಲ್ಲಿನ ಚಿನ್ನದ ದರಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಚಿನ್ನವನ್ನು ಕಾಗದದ(ಬಾಂಡ್) ರೂಪದಲ್ಲಿ ಖರೀದಿಸುವುದರ ಲಾಭವೆಂದರೆ,
👉ಕಳ್ಳತನದ ಭೀತಿ ಇರುವುದಿಲ್ಲ, ಕಾಗದದ ಬಾಂಡ್ ನಿಮ್ಮ ಹೆಸರಿನಲ್ಲಿ ಇರುತ್ತದೆ.
👉ಮೇಕಿಂಗ್ ಚಾರ್ಜ್, ವೇಸ್ಟೇಜ್ ಎಂಬ ಕತ್ತರಿ ಪ್ರಯೋಗ ಇರುವುದಿಲ್ಲ.
👉ನಿಮ್ಮ ಚಿನ್ನ 99.9% ಪರಿಶುದ್ಧತೆಯ ಚಿನ್ನದ ದರವನ್ನು ಹೊಂದಿರುತ್ತದೆ.
👉 ನೀವು ಹೂಡಿದ ಹಣಕ್ಕೆ ವಾರ್ಷಿಕ ಶೇಕಡ 2.5% ಬಡ್ಡಿ ದೊರೆಯುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಅರ್ಧ ವಾರ್ಷಿಕ ಬಡ್ಡಿ ಪಾವತಿಯಾಗುತ್ತದೆ. ಆದರೆ ಭೌತಿಕ ಚಿನ್ನದಲ್ಲಿ ಈ ಸೌಲಭ್ಯ ಇರುವುದಿಲ್ಲ.
👉 ಭೌತಿಕ ಚಿನ್ನವನ್ನು ಸಾಲಕ್ಕಾಗಿ ಅಡ ಇಟ್ಟಂತೆ SGB ಯನ್ನೂ ಕೂಡ ಅಡಮಾನ ಇಡಬಹುದಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಹೂಡಿಕೆಯ ಹಣ ದ್ವಿಗುಣ ಗೊಂಡಿದೆ. 2016 ರ ಜನವರಿಯಲ್ಲಿ ಪ್ರತೀ ಗ್ರಾಂ. ಚಿನ್ನದ ಬೆಲೆ ರೂ.2600/- ಇತ್ತು ಅದು ಇಂದಿಗೆ 5117/- ತಲುಪಿದೆ, ಇದಲ್ಲದೇ ಶೇ.2.5/- ವಾರ್ಷಿಕ ಬಡ್ಡಿಯೂ ದೊರೆಯುವುದು.
ಇನ್ನೇಕೆ ತಡ? ... ಬೇಗನೆ ಎಸ್ ಜಿ ಬಿ ಯಲ್ಲಿ ಹೂಡಿಕೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಛೇರಿ ಸಂಪರ್ಕಿಸಿ.
ಅಗತ್ಯ ದಾಖಲೆಗಳು
1.ಆಧಾರ ಕಾರ್ಡ್ ನ ಝರಾಕ್ಸ
2. ಪ್ಯಾನ್ ಕಾರ್ಡ್ ನ ಝರಾಕ್ಸ
3. ಬ್ಯಾಂಕ್ ಪಾಸ್ ಬುಕ್ ನ ಝರಾಕ್ಸ ಅಥವಾ ಕಾನ್ಸಲ್ಡ್ ಚೆಕ್
4. ಪಾಸ್ಪೋರ್ಟ್ ಸೈಜ್ ಫೋಟೋ - 1
ಸದ್ಯ SGB ಯ 2021-22 ನೇ ಸಾಲಿನ Vನೇ ಸರಣಿ ಚಾಲ್ತಿಯಲ್ಲಿದ್ದು ಆಗಸ್ಟ್ 09 ರಿಂದ 13 ರವರೆಗೆ ಜಾರಿಲ್ಲಿರುತ್ತದೆ. ಪ್ರತಿ 1 ಗ್ರಾಂ ಚಿನ್ನಕ್ಕೆ 4790/- ನಿಗದಿಗೊಳಿಸಲಾಗಿದೆ. SGB ಗೆ ಅರ್ಜಿ ಸಲ್ಲಿಸಲು ಕೇವಲ 5 ದಿನಗಳು ಮಾತ್ರ ಅವಕಾಶವಿದೆ.
SGB Nomination Registration Form
ಕಾಮೆಂಟ್ ಪೋಸ್ಟ್ ಮಾಡಿ