ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜೀವನಕ್ಕೆ ಅಡೆತಡೆ ಉಂಟು ಮಾಡಿದೆ, ಶಾಲಾ ಕಾಲೇಜು, ಅಂಗಡಿ ಮುಂಗಟ್ಟುಗಳು, ಕಾರ್ಖಾನೆಗಳು, ವ್ಯಾಪಾರ ವಹಿವಾಟು ಎಲ್ಲವೂ ಸ್ತಭ್ದಗೊಂಡಿವೆ. ಜನ ದಟ್ಟಣೆ ಆಗದಂತೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರೂ ಕೂಡ ಆದಷ್ಟು ಮನೆಯಲ್ಲೇಯೆ ಇದ್ದು, ಅಗತ್ಯವಿದ್ದಾಗ ಮಾತ್ರವೇ ಹೊರಗೆ ಹೋಗಿ ಕೆಲಸ ಕಾರ್ಯ ಮಾಡಿಕೊಳ್ಳಬೇಕಿದೆ.
ಈಗ ಎಲ್ಲವೂ ಆನ್ಲೈನ್ ವರ್ಕ್ ಫ್ರಂ ಹೋಮ್ ನಿಂದ ತರಕಾರಿ ಕೊಳ್ಳುವವರೆಗೂ ಮನೆಯಲ್ಲೇ ಕುಳಿತು ಮೊಬೈಲ್ ನಿಂದಲೇ ಸಾಕಷ್ಟು ಕೆಲಸ ಮಾಡಬಹುದಾಗಿದೆ. ಈ ಸಾಲಿಗೆ ರಾಖಿಯೂ ಸಹ ಸೇರಿಕೊಂಡಿದ್ದು, ರಾಖಿ ಖರೀದಿಯಿಂದ ಹಿಡುದು, ರಾಖಿಯ ಶುಭಾಶಯ, ಸಂದೇಶ ಪತ್ರ, ಎನ್ವಲಪ್ (ಲಕೋಟೆ) ಖರೀದಿ ಮತ್ತು ಅದರ ಮೇಲೆ ನಿಮ್ಮ ಸಹೋದರರ ಬರೆಯುವುದು ಹೀಗೆ ಎಲ್ಲವನ್ನೂ ಆನ್ಲೈನ್ ನಲ್ಲಿಯೇ ಮಾಡಬಹುದಾಗಿದೆ.
ಹೌದು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ಮಹಿಳೆಯರಿಗಾಗಿ ಆನ್ ಲೈನ್ ರಾಖಿ ಪೋಸ್ಟ್ ಆರಂಭಿಸಿದೆ.
ಕರ್ನಾಟಕ ಅಂಚೆ ವೃತ್ತದ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿ, ಸೂಕ್ತವಾದ ಸಂದೇಶವನ್ನು ಆರಿಸಿ, ಅದಕ್ಕೆ ಆನ್ ಲೈನ್ ಮೂಲಕವೇ ಹಣ ಪಾವತಿಸಿ, ಮನೆಯ ವಿಳಾಸ ನೀಡಿದೆ ಹಬ್ಬದಂದು ರಾಖಿ ಮನೆ ತಲುಪುತ್ತದೆ. ಅಲ್ಲದೆ ನೀವು ಮನೆಯಲ್ಲಿದ್ದುಕೊಂಡೇ ಗಡಿಯಲ್ಲಿರುವ ವೀರ ಯೋಧರಿಗೂ ಸಹ ಅಂಚೆ ಮೂಲಕ ರಾಖಿ ರವಾನಿಸಬಹುದು.
ಆನ್ಲೈನ್ ರಾಖಿ ರವಾನಿಸಲು ಇಲ್ಲಿ ಕ್ಲಿಕ್ ಮಾಡಿ.
ಕಾಮೆಂಟ್ ಪೋಸ್ಟ್ ಮಾಡಿ