Anche Mitra-ಅಂಚೆ ಮಿತ್ರ  

      ಕರೋನ ಬಿಕ್ಕಟ್ಟಿನ ಲಾಕ್ಡೌನ್ ಸಂದರ್ಭದಲ್ಲಿ ಅಂಚೆ ಅಥವಾ ಬ್ಯಾಂಕಿನ ಹಣ ಪಡೆಯಲು  ಆಗುತ್ತಿಲ್ಲವೇ?

    ದೂರದಲ್ಲಿರುವ ತಂದೆ-ತಾಯಿ,  ಬಂಧುಗಳಿಗೆ  ಔಷಧಿ ಅಥವಾ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಕಳುಹಿಸಬೇಕು , ಆದರೆ ಲಾಕ್ಡೌನ್ ನಿಂದಾಗಿ ಹೊರಗೆ ಬರಲು ಆಗುತ್ತಿಲ್ಲ ಏನು ಮಾಡುವುದು?  

  ಚಿಂತೆಬೇಡ..........! "ಅಂಚೆ ಮಿತ್ರ" ನಿಮ್ಮ ಮನೆಬಾಗಿಲಿಗೆ  ಬಂದಿದೆ.

     ಕರ್ನಾಟಕ ಅಂಚೆ ವೃತದಿಂದ ನೂತನ  "ಅಂಚೆ ಮಿತ್ರ"  ಸೇವೆ ಆರಂಭ. ಆನ್ಲೈನ್ ಮೂಲಕ ಅರ್ಜಿಯನ್ನು ತುಂಬಿ ನಿಮ್ಮ ಸಮೀಪದ ಅಂಚೆ ಕಚೇರಿಯ ಸೇವೆಗಳನ್ನು ಪಡೆಯಬಹುದು, ಔಷಧ ಮಾತ್ರೆಗಳನ್ನು ಒಳಗೊಂಡ ಪತ್ರ ಮತ್ತು ಪಾರ್ಸಲ್ ಗಳ ರವಾನೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇನ್ನೂ ಇತರೆ ಸೇವೆ ಪಡೆಯಲು ಮನೆಯಿಂದಲೇ ಅರ್ಜಿ ಸಲ್ಲಿಸಿ ಪಡೆಯಬಹುದು. 

    ಈ ಆನ್ಲೈನ್ ಅರ್ಜಿ ತುಂಬಲು ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಒದಗಿಸಬೇಕು. ಮೊಬೈಲ್ ಗೆ ಓಟಿಪಿ ಮೂಲಕ ದೃಢೀಕರಣ ಮಾಡಿದ ನಂತರ ನಿಮಗೆ ಅಗತ್ಯವಾದ ಸೇವೆಗಳಾದ ಪತ್ರ ರವಾನೆ, ಪತ್ರ ನಿರೀಕ್ಷೆ, ಉಳಿತಾಯ ಖಾತೆ ಹಣ ಹಿಂಪಡೆಯುವುದು, PLI   ಮತ್ತು RPLI ಸಂಬಂಧತ ಸೇವೆಗಳು, ಇತರೆ ಯಾವ ಸೇವೆ ಬೇಕೆಂದು ತಿಳಿಸಿ ಅರ್ಜಿ ಸಲ್ಲಿಸಬೇಕು.

   ಕರೋನ  ಹರಡದಂತೆ ಅಗತ್ಯವಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುತ್ತಾ , ನಿಮ್ಮ ಸಮೀಪದ ಅಂಚೆ ಕಚೇರಿಯಿಂದ ನಿಮಗೆ ಸೇವೆ ಒದಗಿಸಲಾಗುತ್ತದೆ.

 ಈ ಮಾಹಿತಿಯನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳಲು ವಿನಂತಿ.


'ಅಂಚೆ ಮಿತ್ರ' - ಆಪತ್ತಿಗೆ ಒದಗಿದ ಸ್ನೇಹಿತ: ನಿಮ್ಮ ಸೇವೆಯಲ್ಲಿ ಅನವರತ

'ಅಂಚೆ ಮಿತ್ರ' ತಲುಪಲು ಇಲ್ಲಿ ಕ್ಲಿಕ್ ಮಾಡಿ

#AncheMitra, #IndiaFightAgainstCoron, #Corona virus, #CoronaWarrior, #Initiative, #IndiaPost




Post a Comment

ನವೀನ ಹಳೆಯದು