Bharat Ratna Dr. C. V. Raman Stamp |
ಭಾರತ ಸರಕಾರ ಪ್ರತೀ ವರ್ಷ ಫೆಬ್ರುವರಿ 28 (February 28) ನೇ ತಾರೀಖಿನಂದು "ರಾಷ್ಟ್ರೀಯ ವಿಜ್ಞಾನ ದಿನ" 'National Science Day'- February-28 ಆಚರಿಸುತ್ತದೆ. ಈ ದಿನವನ್ನೇ "ರಾಷ್ಟ್ರೀಯ ವಿಜ್ಞಾನ ದಿನ" ಎಂದು ಆಚರಿಸಲು ಮಹತ್ತರ ಕಾರಣವಿದೆ.
1928 ಫೆಬ್ರುವರಿ 28 ಪ್ರಪಂಚದ ವಿಜ್ಞಾನ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ದಿನ ಎಂದು ಹೇಳಬಹುದು, ಡಾ|| ಸಿ ವಿ ರಾಮನ್ (Dr.C.V.Raman) ಅವರು ಬೆಳಕಿನ ಚದುರುವಿಕೆಯ ಕುರಿತ ಸಂಶೋಧನ ಪ್ರಯೋಗ ಮಂಡಿಸಿ ಯಶಸ್ವಿ ಕಂಡ ದಿನ. ವಿಜ್ಞಾನ ಕ್ಷೇತ್ರದಲ್ಲಿ ಡಾ|| ಸಿ ವಿ ರಾಮನ್ ಅವರ ಸಂಶೋಧನ ಪ್ರಯೋಗವನ್ನು "ರಾಮನ್ ಎಫೆಕ್ಟ್"(Raman Effect) ಎಂದು ಕರೆಯಲ್ಪಡುತ್ತದೆ. ಇಂತಹ ಮಹತ್ವದ ದಿನದ ಸ್ಮರಣಾರ್ಥವಾಗಿ ಪ್ರತೀ ವರ್ಷ ಫೆಬ್ರುವರಿ 28 ನೇ ತಾರೀಖಿನಂದು "ರಾಷ್ಟ್ರೀಯ ವಿಜ್ಞಾನ ದಿನ" ಎಂದು ಆಚರಿಸಲಾಗುತ್ತದೆ. ಈ ದಿನದಂದು ದೇಶಾದ್ಯಂತ ಎಲ್ಲ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ ವಿ ರಾಮನ್ ಅವರ ಕೊಡುಗೆ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗುತ್ತದೆ. ಮಾನವ ಕಲ್ಯಾಣದಲ್ಲಿ ವಿಜ್ಞಾನ ಕ್ಷೇತ್ರದ ಕೊಡುಗೆ ಮತ್ತು ಮಹತ್ವವನ್ನು ವಿವರಿಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನ ಮೂಡಿಸಿ ಸಂಶೋಧನಾನಿರತರನ್ನಾಗಿಸಲು ಪ್ರೇರೇಪಿಸುತ್ತದೆ.
ಡಾ|| ಸಿ ವಿ ರಾಮನ್ (Dr.C.V.Raman) ಅವರ ಸಂಶೋಧನ ಪ್ರಯೋಗ "ರಾಮನ್ ಎಫೆಕ್ಟ್" ವಿಶಿಷ್ಟ ಸಂಶೋಧನೆಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಭಾರತ ದೇಶಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಶ್ರೇಯ ಭಾರತ ರತ್ನ ಡಾ|| ಸಿ.ವಿ ರಾಮನ್ ಗೆ ಸಲ್ಲುತ್ತದೆ.
1934 ರಲ್ಲಿ ಬೆಂಗಳೂರಿನ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್"(IISc-Indian Institute of Science) ನ ನಿರ್ದೇಶಕರಾಗಿ ಸೇವೆಗೆ ಸೇರಿದ ಸರ್. ಸಿ. ವಿ. ರಾಮನ್, ಅದೇ ವರ್ಷ ಬೆಂಗಳೂರಿನಲ್ಲಿ "ರಾಮನ್ ಸಂಶೋಧನ ಸಂಸ್ಥೆ" ಸ್ಥಾಪನೆ ಮಾಡುತ್ತಾರೆ. ಇಂದು ಈ ಸಂಸ್ಥೆ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಪಂಚದ ಭೌತಶಾಸ್ತ್ರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಡಾ|| ಚಂದ್ರಶೇಖರ ವೆಂಕಟರಾಮನ್ ನವಂಬರ್ 7, 1888 ರಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿ ಬಳಿಯ ತಿರುವನೈಕಾವಲ್ ನಲ್ಲಿ ಜನಿಸಿದ ಈ ಮಹಾನ್ ಚೇತನ, ಭೌತಶಾಸ್ತ್ರದ ಕ್ಷೇತ್ರಕ್ಕೆ 'ಹೊಸ ಬೆಳಕು' ನೀಡಿದ ದೃವತಾರೆ, 21 ನವಂಬರ್ 1970 ರಂದು ತಮ್ಮ 82 ನೇ ವಯಸ್ಸಿನಲ್ಲಿ ಬೆಂಗಳೂರಿನ ದೇವನಹಳ್ಳಿ ಯಲ್ಲಿ ಅಸ್ತಂಗತವಾಯಿತು.
Dr. C. V. Raman Definitive Stamps |
National Science Day Special Cover |
ಈ ಲೇಖನವನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ