ಸಿಬ್ಬಂದಿ ನೇಮಕಾತಿ ಆಯೋಗವು(Staff Selection Commission) CHSL-Combined Higher Secondary Level (ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್‌)(10+2) 2020 ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.           

               

   2020 SSC CHSL ಪರೀಕ್ಷೆಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 3, 2019 ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ. ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ ಅಪ್ಲಿಕೇಶನ್‌ ಸಲ್ಲಿಸಬಹುದು.

ಹುದ್ದೆಗಳು


  ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಕೇಂದ್ರ ಸರ್ಕಾರ ಅಧೀನದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನೇಮಿಸಲು 2020 SSC CHSL ಪರೀಕ್ಷೆ ನಡೆಸಲಿದೆ.

➯LDC-Lower Division Clerk(ಲೋವರ್ ಡಿವಿಷನ್ ಕ್ಲರ್ಕ್‌) 

➯JSA- Junior Secretariat Assistant (ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್)

➯PA-Postal Assistant (ಪೋಸ್ಟಲ್ ಅಸಿಸ್ಟಂಟ್) 

➯SA-Sorting Assistant(ಸಾರ್ಟಿಂಗ್ ಅಸಿಸ್ಟೆಂಟ್)

➯DEO-Data Entry Operator (ಡಾಟಾ ಎಂಟ್ರಿ ಆಪರೇಟರ್)


ಖಾಲಿಯಿರುವ ಹುದ್ದೆಗಳ ಸಂಖ್ಯೆಯು  ವ್ಯತ್ಯಾಸಗೊಳ್ಳವ ಸಾಧ್ಯತೆಗಳಿದ್ದು, ಹೆಚ್ಚನ ವಿವರಗಳಿಗೆ ವೆಬ್ಸೈಟ್ ಸಂದರ್ಶಿಸಬಹುದು. 

ವಿದ್ಯಾರ್ಹತೆ:


1.      ಅಂಗೀಕೃತ ಪ್ರಾಧಿಕಾರದಿಂದ ಪಿಯುಸಿ(PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2.     ಡೇಟಾ ಎಂಟ್ರಿ ಆಪರೇಟರ್ ಗೆ ಪಿಯುಸಿಯಲ್ಲಿ ವಿಜ್ಞಾನ ಓದಿದ್ದು, ಗಣಿತ ವಿಷಯವನ್ನು ಹೊಂದಿರಬೇಕು.

ವೇತನ ಶ್ರೇಣಿ:


# ಲೋವರ್ ಡಿವಿಷನ್ ಕ್ಲರ್ಕ್‌(LDC) : ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ:ರೂ.1900(ಪರಿಷ್ಕೃತ).


# ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA) : ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ:ರೂ.1900(ಪರಿಷ್ಕೃತ).


# ಪೋಸ್ಟಲ್ ಅಸಿಸ್ಟಂಟ್ (PA): ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ:ರೂ.2400(ಪರಿಷ್ಕೃತ).


# ವಿಂಗಡಣೆ ಸಹಾಯಕ (SA): ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ:ರೂ.2400(ಪರಿಷ್ಕೃತ).

# ಡಾಟಾ ಎಂಟ್ರಿ ಆಪರೇಟರ್ (DEO): ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ:ರೂ.2400(ಪರಿಷ್ಕೃತ).

# ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ: ಪೇ ಲೆವೆಲ್-1 (ರೂ.5200-20200), ಗ್ರೇಡ್ ಪೇ: ರೂ.2400 (ಪರಿಷ್ಕೃತ).


ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಹುದ್ದೆಗಳನ್ನು,  ಎಸ್‌ಎಸ್‌ಸಿ'ಯ ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್ ಟೈಯರ್-1 ಪರೀಕ್ಷೆ ಕಂಪ್ಯೂಟರ್ ಆಧಾರಿತವಾಗಿರುತ್ತದೆ.

ವಯೋಮಿತಿ: 


01 ಜನವರಿ 2020ಕ್ಕೆ ಅನ್ವಯವಾಗುವಂತೆ,

ಸಾಮಾನ್ಯ ವರ್ಗ: 18 ರಿಂದ 27 (02/01/1993 ರಿಂದ 01/01/2002  ದಿನಾಂಕದೊಳಗೆ ಜನಿಸಿರಬೇಕು) ವಯಸ್ಸಿನೊಳಗಿರಬೇಕು. 

ಪ.ಜಾತಿ/ಪ.ಪಂಗಡಕ್ಕೆ 5 ವರ್ಷ, 
ಒಬಿಸಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷ, 
ಒಬಿಸಿ ವಿಕಲಚೇತನರಿಗೆ 13 ವರ್ಷ, 
ಪ.ಜಾತಿ/ಪ.ಪಂಗಡದ ವಿಕಲಚೇತನರಿಗೆ 15 ವರ್ಷ, 
ವಿಧವೆ/ವಿಚ್ಛೇದಿತೆಯರಿಗೆ 8 ವರ್ಷ, 
ಪ.ಜಾತಿ/ಪ.ಪಂಗಡದ ವಿಧವೆ/ವಿಚ್ಛೇದಿತೆಯರಿಗೆ 13 ವರ್ಷಗಳ ಹಾಗೂ 
ಮಾಜಿ ಸೈನಿಕರಿಗೆ/ಸಶಸ್ತ್ರ ದಳದ ಯೋಧರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಪರೀಕ್ಷಾ ಶುಲ್ಕ:


ರೂ.100/-(ನೂರು ರೂಪಾಯಿಗಳು ಮಾತ್ರ).

ಆದರೆ, ಮಹಿಳಾ ಅಭ್ಯರ್ಥಿಗಳು,ಪ.ಜಾತಿ/ಪ.ಪಂಗಡ,ವಿಕಲಚೇತನರು, ಮಾಜಿ ಸೈನಿಕರಿಗೆಪರೀಕ್ಷಾ ಶುಲ್ಕದಿಂದ ವಿನಾಯಿತಿಇದೆ.


ಪರೀಕ್ಷಾ ಕೇಂದ್ರಗಳು:


 ಸಿಬ್ಬಂದಿ ನೇಮಕಾತಿ ಆಯೋಗದ ಕರ್ನಾಟಕ-ಕೇರಳ ವಿಭಾಗ (KKR REGION)ದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ಉಡುಪಿ, ಶಿವಮೊಗ್ಗ, ತಿರುವನಂತಪುರಂ,ಕೊಚ್ಚಿ, ತ್ರಿಶ್ಶೂರ್, ಕೊಟ್ಟಾಯಂ, ಕವರಟ್ಟಿ, ಕಣ್ಣೂರು ಹಾಗೂ ಕೋಝಿಕೋಡಿನಲ್ಲಿ ಪರೀಕ್ಷಾ ಕೇಂದ್ರಗಳಿವೆ. 

 ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಧಿತ ಪರೀಕ್ಷಾ ಕೇಂದ್ರಗಳಿಗೆ ನೀಡಿರುವ ಸೂಕ್ತ ಕೋಡ್ ಗಳನ್ನು ದಾಖಲಿಸಬೇಕು. ಒಬ್ಬ ಅಭ್ಯರ್ಥಿ ಓಟ್ಟು ಮೂರು ಕೇಂದ್ರಗಳನ್ನು  ಆಯ್ಕೆ ಮಾಡಬಹುದಾಗಿದೆ. ಆದರೆ, ಪರೀಕ್ಷಾಪ್ರಾಧಿಕಾರವು ಆ ವಿಭಾಗದಲ್ಲಿರುವ ಯಾವುದೇ ಕೇಂದ್ರವನ್ನು ಪರೀಕ್ಷಾ ಕೇಂದ್ರವಾಗಿ ನೀಡುವ ಅಧಿಕಾರವನ್ನು ಹೊಂದಿದೆ.

ಪರೀಕ್ಷಾ ವೇಳಾಪಟ್ಟಿ ಹಾಗೂ ವಿಧಾನ:


ಮೊದಲನೆಯ ಹಂತ: 


 ಮೊದಲನೆಯ ಹಂತದ ಪರೀಕ್ಷೆಯು 2020ರ ಮಾರ್ಚ್ 16 ರಿಂದ ಮಾರ್ಚ್ 23ರ ವರೆಗೆ ನಡೆಯಲಿದ್ದು, ಯಾವುದೇ ಒಂದು ದಿನದಲ್ಲಿ ಪರೀಕ್ಷೆ ಇರುತ್ತದೆ.(ಪರೀಕ್ಷಾ ದಿನಾಂಕ ಬದಲಾವಣೆಯ ಸಾಧ್ಯತೆಗಳಿದ್ದು, ಅಧಿಕೃತ ವೆಬ್ಸೈಟ್ ಭೇಟಿ ನೀಡಿ) ಪರೀಕ್ಷೆಯುವ
ಒಂದು ಗಂಟೆಯ ಅವಧಿಯದ್ದಾಗಿದ್ದು, 100 ಬಹುಆಯ್ಕೆಯ ಪ್ರಶ್ನೆಗಳು ಇರಲಿವೆ. ಪ್ರತಿ ಪ್ರಶ್ನೆಗೆ 2 ಅಂಕಗಳಿದ್ದು, ತಪ್ಪುಉತ್ತರಕ್ಕೆ ಅರ್ಧ ಅಂಕ ಕಡಿತವಾಗಲಿದೆ. 50 ಅಂಕಗಳ ನಾಲ್ಕು ವಿಭಾಗಗಳಿವೆ. ಈ ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷಿನಲ್ಲಿ ಮಾತ್ರವೇ ನಡೆಯಲಿದೆ. ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ.

ಎರಡನೆಯ ಹಂತ: 


 ಎರಡನೇ ಹಂತದ ಪರೀಕ್ಷೆಯು 28 ಜೂನ್ 2020 ರಂದು ನಡೆಯಲಿದೆ.  ಮೊದಲನೆಯ ಹಂತದಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ ಅವಕಾಶವಿರುತ್ತದೆ. ಇದು ವಿವರವಾಗಿ ಉತ್ತರವನ್ನು ಬರೆಯುವ ಹಂತವಾಗಿರುತ್ತದೆ. ಒಂದು ಗಂಟೆಯ ಅವಧಿಯ ಪರೀಕ್ಷೆ. 200-250 ಪದಗಳ ಒಂದು ಪ್ರಬಂಧ ಹಾಗೂ150-200 ಪದಗಳ ಒಂದು ಅರ್ಜಿ ಬರೆಯಲಿರುತ್ತದೆ. ಈ ಹಂತದಲ್ಲಿ ಉತ್ತೀರ್ಣರಾಗಲು 33%ಅಂಕಗಳನ್ನು ಪಡೆಯಬೇಕಿದೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರವೇ ಬರೆಯಬಹುದಾಗಿದೆ. ಎರಡೂ ಭಾಷೆಗಳನ್ನು ಒಟ್ಟಾಗಿಸಿ ಬರೆದರೆ ಅದಕ್ಕೆ ಸೊನ್ನೆ ಅಂಕ ನೀಡಲಾಗುತ್ತದೆ.

ಮೂರನೇ ಹಂತ: 


 ಕಂಪ್ಯೂಟರ್ ಕೌಶಲ್ಯ ಪರೀಕ್ಷೆ : ಪೋಸ್ಟಲ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ ಪ್ರತಿ ನಿಮಿಷಕ್ಕೆ 35 ಇಂಗ್ಲಿಷ್ ಪದಗಳನ್ನು ಅಥವಾ 30 ಹಿಂದಿ ಪದಗಳನ್ನು ಕಂಪ್ಯೂಟರಿನಲ್ಲಿ ಟೈಪ್ ಮಾಡಬೇಕು. ಇದು   ಹತ್ತು ನಿಮಿಷ ಅವಧಿಯ ಪರೀಕ್ಷೆಯಾಗಿರುತ್ತದೆ.  ವಿಕಲಾಂಗತೆ  ಪ್ರಮಾಣ ಆಧಾರಿತವಾಗಿ  ವಿಕಲಚೇತನರಿಗೆ 5 ನಿಮಿಷಗಳ ವಿನಾಯಿತಿ ಇದೆ.

  ಉಳಿದ ಹುದ್ದೆಗಳಿಗೆ ಒಂದು ಗಂಟೆಯಲ್ಲಿ ಕಂಪ್ಯೂಟರ್  ಕೀ ಬೋರ್ಡಿನಲ್ಲಿ ಕನಿಷ್ಟ 8000 ಕೀ ಸ್ಟ್ರೋಕ್ ಒತ್ತಬೇಕು. ಆದರೆ, ಡೇಟಾ ಎಂಟ್ರಿ ಹುದ್ದೆಗೆ ಒಂದು ಗಂಟೆಯಲ್ಲಿ ಕಂಪ್ಯೂಟರ್ಕೀಬೋರ್ಡಿನಲ್ಲಿ ಕನಿಷ್ಟ 15,000 ಕೀ ಸ್ಟ್ರೋಕ್ ಒತ್ತಬೇಕು.  ಮೊದಲ ಹಾಗೂ ಎರಡನೆ ಹಂತದಲ್ಲಿ ಕನಿಷ್ಟ ಉತ್ತೀರ್ಣವಾಗಲು ಅಗತ್ಯವಿರುವ ಅಂಕಗಳನ್ನು (ಎರಡೂ ಹಂತಗಳಲ್ಲಿ ಒಟ್ಟು 33%) ಪಡೆದವರಿಗೆ ಮಾತ್ರವೇ ಈ ಹಂತಕ್ಕೆ ಪ್ರವೇಶವಿರುತ್ತದೆ.

ಶುಲ್ಕ ಪಾವತಿ: 

   ಅರ್ಜಿ ಸಲ್ಲಿಸಿದ ನಂತರ ಶುಲ್ಕ ವಿನಾಯಿತಿ ಹೊಂದಿರುವವರನ್ನು ಹೊರತುಪಡಿಸಿ, ಉಳಿದವರು ಶುಲ್ಕ ಪಾವತಿಸಿದರೆ ಮಾತ್ರ ಅರ್ಜಿ ಸಲ್ಲಿಕೆ ಸಂಪೂರ್ಣವಾಗುತ್ತದೆ. ಶುಲ್ಕವನ್ನು ಭೀಮ್ ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಎಸ್.ಬಿ.ಐ. ಚಲನ್ ಮುಖಾಂತರ  ಕೂಡಾ ಪಾವತಿಸಬಹುದು.

ಶುಲ್ಕ ಪಾವತಿಗೆ ಕೊನೆಯ ದಿನ 12.01.2020

ಚಲನ್ ಮುಖಾಂತರ ಶುಲ್ಕ ಪಾವತಿಗೆ ಕೊನೆಯ ದಿನ 14.01.2020

ಅಧಿಸೂಚನೆ ಹಾಗೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು

# ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಡಿಸೆಂಬರ್ 3, 2019

# ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/01/2020 (ರಾತ್ರಿಗಂಟೆ 11.59ಕ್ಕೆ)

# 2020 SSC CHSL ಟೈಯರ್-1 ಪರೀಕ್ಷೆ ದಿನಾಂಕ : ಮಾರ್ಚ್‌ 16-17, 2020

👍 All the Best...

Post a Comment

ನವೀನ ಹಳೆಯದು