ಕರ್ನಾಟಕ ಅಂಚೆ ವೃತ್ತವು ಕರ್ನಾಪೆಕ್ಸ 2019 ರಲ್ಲಿ ಬಿಡುಗಡೆ ಮಾಡಿದ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರಮಾಲೆ" ಎಂಬ ವರ್ಣರಂಜಿತ ಪುಸ್ತಕ ಕಿನ್ನರ ಲೋಕದ ಕುತೂಹಲ ತಣಿಸುವ ಜ್ಞಾನದೀವಿಗೆ ಎಂದು ಹೇಳಬಹುದು.
"ಅಂಚೆ ಚೀಟಿಗಳಿಂದ ಕನ್ನಡ ಅಕ್ಷರಮಾಲೆ" ಪುಸ್ತಕ |
ಪುಸ್ತಕ ತುಂಬಾ ಆಕರ್ಷಕವಾಗಿದೆ, ಮುಖಪುಟ ನೋಡಿದ ತಕ್ಷಣ ಪುಸ್ತಕವನ್ನು ತೆರೆಯಲು ಮಕ್ಕಳಲ್ಲಿ ಆಸಕ್ತಿ ಉಂಟುಮಾಡುತ್ತದೆ. ಪುಸ್ತಕವನ್ನು ತೆರೆದ ನಂತರ ಅದರಲ್ಲಿರುವ ಅಂಶಗಳು ಮಕ್ಕಳನ್ನು ನಿಬ್ಬೆರಗಾಗುವಂತೆ ಮಾಡಿ, ಪ್ರತಿ ಒಂದು ವರ್ಣಮಾಲೆಗೆ ಸಂಬಂಧಿಸಿದ ಪದಗಳಿಗೆ ಅನುಗುಣವಾಗಿ ಅಂಚೆಚೀಟಿಗಳನ್ನು ಮುದ್ರಿಸಿರುವುದು ನಾವಿನ್ಯತೆಯ ದ್ಯೋತಕ. ಇದೊಂದು ಅಂಕಲಿಪಿ ಪುಸ್ತಕವಾದರೂ ಕೂಡ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಅಂಚೆ ಚೀಟಿ ಕುರಿತು ಕಿರು ಪರಿಚಯ ಹಾಗೂ ಸಾಮಾನ್ಯ ಜ್ಞಾನವನ್ನು ನೀಡುವಂತ ಒಂದು ಪುಸ್ತಕವಾಗಿದೆ. ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹದ ಹವ್ಯಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಅಂಚೆ ಚೀಟಿ ಸಂಗ್ರಹಕಾರರೂ ಕೂಡ ಸಂಗ್ರಹಿಸಿಟ್ಟುಕೊಳ್ಳಬಹುದಾದ ಅಪರೂಪದ ಪುಸ್ತಕವಾಗಿದೆ.
ಅಂಚೆ ಚೀಟಿಗಳ ಮೂಲಕ ಕನ್ನಡ ಅಕ್ಷರ ಮಾಲೆಯನ್ನು ಕಲಿಸುವ ವಿನೂತನ ಪರಿಕಲ್ಪನೆಯನ್ನು ಮಂಡಿಸಿದ ಉಡುಪಿಯ ಖ್ಯಾತ ಅಂಚೆಚೀಟಿ ಸಂಗ್ರಹಕಾರರಾದ ಶ್ರೀ ಕೃಷ್ಣಯ್ಯನವರು, ಈ ಪುಸ್ತಕವನ್ನು ಹೊರತರಲು ಶ್ರಮಿಸಿದ ದಕ್ಷಿಣ ಕರ್ನಾಟಕ ವಲಯದ ಪಿಎಂಜಿ ಆಗಿರುವ ಶ್ರೀ ಎಸ್. ರಾಜೇಂದ್ರಕುಮಾರ್ ರವರು, ಹಾಗೆಯೇ ಈ ನವೀನ ಪರಿಕಲ್ಪನೆಗೆ ಪ್ರೋತ್ಸಾಹ ನೀಡಿದ ಕರ್ನಾಟಕ ಅಂಚೆ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಆದ ಡಾ. ಚಾರ್ಲ್ಸ್ ಲೋಬೋ ಸರ್ ಅಭಿನಂದನೆಗೆ ಅರ್ಹರು. ಸದೃಢ ಕವಚಗಳನ್ನು ಹೊಂದಿದ ಈ ಪುಸ್ತಕ ದೀರ್ಘಕಾಲ ಬಾಳಿಕೆ ಬರುವಂತೆ ಜೋಡಣೆ ಮಾಡಲಾಗಿದೆ. ಕೇವಲ 200/- (ಎರಡು ನೂರು) ರೂಪಾಯಿಗಳಿಗೆ ಲಭ್ಯ ಇರುವ ಪುಸ್ತಕವನ್ನು ಆಯ್ದ ಪ್ರಧಾನ ಅಂಚೆ ಕಚೇರಿಗಳ ಮೂಲಕ ಪಡೆದುಕೊಳ್ಳಬಹುದು.
ಕಾಮೆಂಟ್ ಪೋಸ್ಟ್ ಮಾಡಿ