ಹೌದು,  ಪ್ರಧಾನ ಮಂತ್ರಿ ಸುರಕ್ಷಾ ವಿಮಾ (PMSBY- Pradhan Mantri Suraksha Bima Yojana)   ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ (PMJJBY-Pradhan Mantri Jeevan Jyoti Bima Yojana)  ಯೋಜನೆ ಎಂಬ ಎರಡು ಮಹತ್ವಾಕಾಂಕ್ಷಿ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಸುಮಾರು ಇಪ್ಪತ್ತು ಕೋಟಿ ಜನರು ಈ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ. 
     PMJJBY AND PMSBY 

    ಈ ಸೌಲಭ್ಯವನ್ನು ಪಡೆಯಲು ನೀವು ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು.  ಖಾತೆ ಹೊಂದಿರದೆ ಇದ್ದರೆ  ಉಳಿತಾಯ ಖಾತೆ ತೆರೆಯುವ ಜೊತೆಗೆ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. 

      ನಿಮ್ಮ ಖಾತೆಯಲ್ಲಿ ಸೂಕ್ತ ಮೊತ್ತ (Sufficient Balance) ಕಾಪಾಡಿಕೊಂಡು ಸ್ವಯಂ ವರ್ಗಾವಣೆಯ ( Auto Debit-ಅಟೋ ಡೆಬಿಟ್) ಮೂಲಕ  ಯೋಜನೆಯ ವಾರ್ಷಿಕ ವಂತಿಗೆ (Premium-ಪ್ರೀಮಿಯಮ್)  ತುಂಬಬಹುದಾಗಿದೆ.  

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY- Pradhan Mantri Suraksha Bima Yojana) 

PMSBY


ವಯೋಮಿತಿ

     18-70 ವರ್ಷದೊಳಗಿನ ಯಾವುದೇ ಭಾರತೀಯ ಪ್ರಜೆ ಲಿಂಗ, ಜಾತಿ, ಪಂತದ ಭೇದವಿಲ್ಲದೆ ಈ ಯೋಜನೆ ಪಡೆಯಬಹುದು.

ವಂತಿಗೆ (Premium) 

  ವಾರ್ಷಿಕ ವಂತಿಗೆ (Premium-ಪ್ರೀಮಿಯಮ್) ಕೇವಲ 12 ರೂಪಾಯಿಗಳನ್ನು ಪಾವತಿಸಿದರೆ ಸಾಕು.


ವಿಮೆಯ ನಿಯಮ ಮತ್ತು ಪ್ರಯೋಜನ 

   ಈ ಯೋಜನೆಯ ಅಡಿಯಲ್ಲಿ ಅಪಘಾತ ವಿಮೆ (Accident Insurance)  ಪಡೆಯಬಹುದಾಗಿದ್ದು, 


  • ಅಪಘಾತದ ಪರಿಣಾಮದಿಂದಾಗಿ ಉಂಟಾದ ಅಂಗವಿಕಲತೆಗೆ 1 ಲಕ್ಷ ರೂಪಾಯಿ ಅಪಘಾತ ವಿಮೆಯನ್ನು ವಿಮಾದಾರನಿಗೆ ನೀಡಲಾಗುವುದು. 
  • ಅಪಘಾತದ ಪರಿಣಾಮದಿಂದಾಗಿ ಉಂಟಾದ ಮರಣಕ್ಕೆ 2 ಲಕ್ಷ ರೂಪಾಯಿ ಅಪಘಾತ ವಿಮೆಯನ್ನು ವಿಮಾದಾರನ ನಾಮನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು.

 ಅಂದರೆ ನೀವು 18-70 ವರ್ಷದೊಳಗಿನ ವಯಸ್ಸಿನವರಾಗಿದ್ದರೆ
ತಿಂಗಳಿಗೆ ಕೇವಲ ಒಂದು ರೂಪಾಯಿ ಪಾವತಿಸಿ 2  ಲಕ್ಷ ರೂಪಾಯಿ  ಅಪಘಾತ  ವಿಮೆ ಪಡೆಯಬಹುದಾಗಿದೆ. 


ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY- Pradhan Mantri Jeevan Jyoti  Bima Yojana) 


PMJJBY 

ವಯೋಮಿತಿ

   18-50 ವರ್ಷದೊಳಗಿನ ಯಾವುದೇ ಭಾರತೀಯ ಪ್ರಜೆ ಲಿಂಗ, ಜಾತಿ, ಪಂತದ ಭೇದವಿಲ್ಲದೆ ಈ ಯೋಜನೆ ಪಡೆಯಬಹುದು.

ವಂತಿಗೆ (Premium) 

  ವಾರ್ಷಿಕ ವಂತಿಗೆ (Premium-ಪ್ರೀಮಿಯಮ್) ಕೇವಲ 330 ರೂಪಾಯಿಗಳನ್ನು ಪಾವತಿಸಿದರೆ ಸಾಕು.


ವಿಮೆಯ ನಿಯಮ ಮತ್ತು ಪ್ರಯೋಜನ 

   ಈ ಯೋಜನೆಯ ಅಡಿಯಲ್ಲಿ ಜೀವ ವಿಮೆ (Life Insurance)  ಪಡೆಯಬಹುದಾಗಿದ್ದು, 

   ಸಹಜ ಮರಣಕ್ಕೆ (Normal Death) ಅಥವಾ ಯಾವುದೇ ಕಾರಣಕ್ಕೂ ಉಂಟಾದ ಸಾವಿಗೂ (Death By Any Cause) 2 ಲಕ್ಷ ರೂಪಾಯಿ ಜೀವ ವಿಮೆಯನ್ನು ವಿಮಾದಾರನ ನಾಮನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು.

  ನೀವು 18-50 ವರ್ಷದೊಳಗಿನ  ವಯಸ್ಸಿನವರಾಗಿದ್ದರೆ ಈ ಎರಡೂ ಯೋಜನೆ ಪಡೆದುಕೊಂಡು ದಿನಕ್ಕೆ  ಕೇವಲ ಒಂದು ರೂಪಾಯಿ ಗಿಂತಲೂ ಕಡಿಮೆ ಪಾವತಿಸಿ 2  ಲಕ್ಷ ರೂಪಾಯಿ ಜೀವ ವಿಮೆ ಹಾಗೂ  2 ಲಕ್ಷ ರೂಪಾಯಿ ಅಪಘಾತ ವಿಮೆಯೊಂದಿಗೆ ಗರಿಷ್ಟ 4 ಲಕ್ಷ ರೂಪಾಯಿ ವಿಮೆ ಪಡೆಯಬಹುದಾಗಿದೆ.

   ವಯಸ್ಸಿಗೆ ಅನುಗುಣವಾಗಿ ಎರಡೂ ಯೋಜನೆಯಲ್ಲಿ ಭಾಗಿದಾರರಾಗಬಹುದು ಅಥವಾ ಯಾವುದಾದರೂ ಒಂದು ಯೋಜನೆ ಪಡೆದುಕೊಳ್ಳಬಹುದು.

  ಈ ಎರಡೂ ಯೋಜನೆಯ ಅವಧಿ ನಂತರ ಅಂದರೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ (PMSBY) 70 ವರ್ಷ ವಯಸ್ಸು ಪೂರ್ಣಗೊಂಡ ನಂತರ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ  (PMJJBY)  50 ವರ್ಷ ವಯಸ್ಸು ಪೂರ್ಣಗೊಂಡ ನಂತರ ವಿಮೆಯ ಸೌಲಭ್ಯ ಇರುವುದಿಲ್ಲ, ಹಾಗೂ ಪರಸ್ಪರ ಸಹಕಾರ ತತ್ವದಡಿ ಈ ಯೋಜನೆಗಳು ಕಾರ್ಯನಿರ್ವಹಿಸುತ್ತಿರುವದರಿಂದ  ನೀವು ಪಾವತಿಸಿದ ಹಣ ಹಿಂತಿರುಗಿಸುವುದಿಲ್ಲ.


    ಬಡ ಮತ್ತು ಮದ್ಯಮ ವರ್ಗದ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಆ ಕುಟುಂಬಕ್ಕೆ ಆಧಾರ ಸ್ತಂಭವಾಗಿರುತ್ತಾನೆ, ಒಂದು ವೇಳೆ ಅನಿರೀಕ್ಷಿತ ಘಟನೆಯಲ್ಲಿ ಆ ವ್ಯಕ್ತಿ ಮೃತನಾದಲ್ಲಿ ಇಡೀ ಕುಟುಂಬವು ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ.     ಆದ್ದರಿಂದ ಇಂತಹ ಅನಿರೀಕ್ಷಿತ ಆಘಾತಗಳನ್ನು ಎದುರಿಸಲು ಭಾರತ ಸರಕಾರ ರೂಪಿಸಿದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ (PMSBY- Pradhan Mantri Suraksha Bima Yojana)   ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ (PMJJBY-Pradhan Mantri Jeevan Jyoti Bima Yojana)  ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸುರಕ್ಷತೆಯ ಜೀವನ ನಡೆಸಲು ಸಾಧ್ಯ. ಹಾಗಾದರೆ ಇಂದೇ ಅಂಚೆ ಕಚೇರಿಗೆ ಭೇಟಿ ನೀಡಿ ಯೋಜನೆಯಲ್ಲಿ ಪಾಲ್ಗೊಳ್ಳಿ.

  ಇನ್ನು ನೀವು ಜೀವನದ ಸಂಧ್ಯಾ ಕಾಲದಲ್ಲಿ ಭದ್ರತೆಯನ್ನು ಬಯಸಿ ಪಿಂಚಣಿ ಪಡೆಯಲು 'ಅಟಲ್ ಪಿಂಚಣಿ ಯೋಜನೆ' (APY-Atal Pension Yojana) ಪಡೆದುಕೊಳ್ಳಬಹುದು.

Post a Comment

ನವೀನ ಹಳೆಯದು