Post Office Mobile App |
ತನ್ನ ಅಸ್ತಿತ್ವಕ್ಕೆ ಸವಾಲು ಹಾಕಿದ ತಂತ್ರಜ್ಞಾನವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಅಂಚೆ ಇಲಾಖೆ ಹೊಸ ರೂಪ ಪಡೆದುಕೊಂಡು ಅನೇಕ ಗ್ರಾಹಕ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಿಂದಾಗಿ ಇತ್ತೀಚೆಗೆ ಅಂಚೆ ಕಚೇರಿಗಳು ಹೆಚ್ಚಿನ ಗ್ರಾಹಕರಿಂದ ತುಂಬಿ ಉದ್ದದ ಸಾಲಿನಲ್ಲಿ ನಿಂತು ಸೇವೆ ಪಡೆದುಕೊಳ್ಳಬೇಕಾಗಿದೆ, ಇದೊಂದು ಖುಷಿಯ ವಿಚಾರವಾದರೂ, ವೇಗದ ಜಗತ್ತಿನಲ್ಲಿ ಯಾರಿಗೂ ಸಮಯ, ತಾಳ್ಮೆ ಇಲ್ಲದಾಗಿದೆ, ಅಲ್ಲದೇ ಎಲ್ಲ ವ್ಯವಹಾರಗಳು ಆನ್ಲೈನ್ ಮೂಲಕ ನೆಡೆಯುತ್ತಿರುವುದನ್ನು ಮನಗಂಡ ಅಂಚೆ ಇಲಾಖೆ, ಅಂಚೆ ಕಚೇರಿಗಳ ಗ್ರಾಹಕರ ಅನುಕೂಲಕ್ಕಾಗಿ ಇಂಡಿಯಾ ಪೋಸ್ಟ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಅಂಚೆ ಕಚೇರಿಗೆ ಗ್ರಾಹಕರು ಅಂಚೆ ಕಚೇರಿಗೆ ಭೇಟಿ ನೀಡದೆ, ತಾವು ಇರುವೆಡೆಯಿಂದಲೇ ಆರ್ಡಿಖಾತೆ RD-(Reccuring Deposit Account), ಪಿಪಿಎಫ್ (PPF-Public Provident Fund Account) ಖಾತೆಗಳಿಗೆ ಮತ್ತು ಇತರ ಅಂಚೆ ಕಚೇರಿ ಯೋಜನೆಗಳಿಗೆ ಠೇವಣಿ ಇಡುವುದು ಸೇರಿದಂತೆ ಹಲವು ವಹಿವಾಟು ನಡೆಸಲು ಇದು ಸಹಾಯ ಮಾಡುತ್ತದೆ.ಗ್ರಾಹಕರು ಗೂಗಲ್ 'ಪ್ಲೇ ಸ್ಟೋರ್' ನಿಂದ ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಡೌನ್‌ಲೋಡ್ ಮಾಡಿಕೊಂಡು ವ್ಯವಹಾರ ನಡೆಸಬಹುದಾಗಿದೆ.
ಅಪ್ಲಿಕೇಶನ್ ಸಕ್ರಿಯಗೊಳಿಸುವ ವಿಧಾನ
ಹಂತ 1: ಗೂಗಲ್ 'ಪ್ಲೇ ಸ್ಟೋರ್' ನಿಂದ ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಡೌನ್‌ಲೋಡ್ ಮಾಡಿಕೊಳ್ಳಿ.
ಹಂತ 2: ಅಪ್ಲಿಕೇಶನ್ ತೆರೆಯಿರಿ ಮತ್ತು ಮೊಬೈಲ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸುವ(Activate) ಬಟನ್ ಕ್ಲಿಕ್ ಮಾಡಿ.
ಹಂತ 3: ನೀವು ಪೋಸ್ಟ್ ಇಲಾಖೆಯೊಂದಿಗೆ ಒದಗಿಸಿರುವ ಭದ್ರತಾ ರುಜುವಾತುಗಳನ್ನು(CIF Number etc) ದಾಖಲಿಸಿ.
ಹಂತ 4: ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (OTP-One Time Password) ಕಳುಹಿಸಲಾಗುತ್ತದೆ. 'ಓಟಿಪಿ' ಯನ್ನು ಯಶಸ್ವಿಯಾಗಿ ಮೌಲ್ಯೀಕರಿಸಿದ ನಂತರ, ಖಾತೆದಾರರಿಗೆ 4 ಅಂಕಿಯ ಎಂಪಿಐಎನ್(mPin) ನಮೂದಿಸಲು ಕೇಳಲಾಗುತ್ತದೆ.
ಹಂತ 5: ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಲು, ನಿಮ್ಮ ಬಳಕೆದಾರ ಐಡಿ ಮತ್ತು ಹೊಸ ಎಂಪಿಐಎನ್ ಅನ್ನು ನಮೂದಿಸಿ, ವ್ಯವಹರಿಸಬಹುದು.
ಎಚ್ಚರಿಕೆ: OTP, mPin ಗಳನ್ನು ಯಾರೊಂದಿಗೂ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಈ ಅಂಶಗಳು ನಿಮ್ಮ ಖಾತೆಯು ದುರುಪಯೋಗದಿಂದ ಹಣ ಕಳೆದು ಕೊಳ್ಳುವ ಭೀತಿ ಯಿಂದ ಸುರಕ್ಷಿತವಾಗಿ ಇರಿಸಲು ಸಹಕಾರಿ.
ಗಮನದಲ್ಲಿ ಇಡಿ:
ಪೋಸ್ಟ್‌ನ ಹೊಸ ಅಪ್ಲಿಕೇಶನ್‌ನ ಮೂಲಕ ವಹಿವಾಟು ನಡೆಸಲು, ಗ್ರಾಹಕರು ಸಿಬಿಎಸ್ ಅಂದರೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನ ಹೊಂದಿರುವ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕು.
ನೀವು ಅಂಚೆ ಕಚೇರಿಯಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರುವುದಕ್ಕೂ ಮೊದಲು ಖಾತೆಯನ್ನು ತೆರೆದಿದ್ದಲ್ಲಿ, ಸೇವಾ ವಿನಂತಿಯೊಂದಿಗೆ ಹೊಸ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಒಂದು ವೇಳೆ ಉಳಿತಾಯ ಖಾತೆಯನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ನಂತರ ತೆರೆದಿದ್ದರೆ, ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
'ಮೊಬೈಲ್ ಬ್ಯಾಂಕಿಂಗ್' ನ ಸೌಲಭ್ಯಗಳು
ಅಂಚೆ ಕಚೇರಿ ಉಳಿತಾಯ ಖಾತೆದಾರರು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಪಡೆಯಬಹುದಾದ ಸೌಲಭ್ಯಗಳು ಈ ಕೆಳಗಿನಂತಿವೆ
- ಖಾತೆ ಬಾಕಿ ಮತ್ತು ವಿವರಗಳು - ಉಳಿತಾಯ (SB-Savings Bank Account), ಸಂಚಿತ ಠೇವಣಿ (RD-Recurring Deposit Account), ಸಂಚಿತ ಠೇವಣಿ ವಿರುದ್ಧ ಸಾಲ(LARD-Loan Against RD), ನಿಗದಿಿಿ ಅವಧಿ ಖಾತೆ (TD-Time/Term Deposit), ಪಿಪಿಎಫ್ (PPF-Public Provident Fund Account), ಪಿಪಿಎಫ್ ವಿರುದ್ಧ ಸಾಲ, ಸುಕನ್ಯಾ ಸಮೃದ್ಧಿ ಖಾತೆ (SSA-Sukanya Samruddhi Account) ಎನ್‌ಎಸ್‌ಸಿ ಮತ್ತು ಇತರ ಖಾತೆಗಳ ಖಾತೆಯ ಬಾಕಿ (Balance Inquiry) ಪರಿಶೀಲಿಸಬಹುದು.
- ವಹಿವಾಟಿನ ಇತಿಹಾಸ - ಉಳಿತಾಯ, ಆರ್‌ಡಿ, ಟಿಡಿ, ಪಿಪಿಎಫ್, ಪಿಪಿಎಫ್ ವಿರುದ್ಧ ಸಾಲ, ಎನ್‌ಎಸ್‌ಸಿ ಖಾತೆಗಳ ಹಿಂದಿನ ವಹಿವಾಟಿನ ವಿವರ ಪಡೆಯಬಹುದು.
- ಕಿರು ವಹಿವಾಟಿನ ಮಾಹಿತಿ - ಉಳಿತಾಯ, ಪಿಪಿಎಫ್ ಖಾತೆಗಳ ಕಿರು ವಹಿವಾಟಿನ (Mini Statement) ಮಾಹಿತಿಯನ್ನು ಪಡೆಯಬಹುದು.
- ಸ್ವಂತ ಉಳಿತಾಯ ಖಾತೆ ಮತ್ತು ಇತರ ಅಂಚೆ ಕಚೇರಿ ಉಳಿತಾಯ ಖಾತೆದಾರರ ನಡುವೆ ಹಣ ವರ್ಗಾವಣೆ (Amount Transfer) ಮಾಡಬಹುದಾಗಿದೆ.
- ಉಳಿತಾಯ ಖಾತೆಯ ನಡುವೆ ಸ್ವಂತ / ಲಿಂಕ್ ಮಾಡಿದ ಆರ್ಡಿ ಮತ್ತು ಸ್ವಂತ / ಲಿಂಕ್ಡ್ ಎಲ್‌ಎಆರ್ಡಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಹುದು.
- ಉಳಿತಾಯ ಖಾತೆಯಿಂದ ಸ್ವಂತ / ಲಿಂಕ್ ಮಾಡಿದ ಪಿಪಿಎಫ್ (ಪಿಪಿಎಫ್‌ನಲ್ಲಿ ಚಂದಾದಾರಿಕೆ ಮತ್ತು ಸಾಲ) ಮತ್ತು ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಹುದು.
- RD ಖಾತೆ ತೆರೆಯಲು ವಿನಂತಿ.
- TD ಖಾತೆ ತೆರೆಯಲು ವಿನಂತಿ.
- ಚೆಕ್ ಪಾವತಿಯನ್ನು (Cheque Payment) ನಿಲ್ಲಿಸಲು ವಿನಂತಿ ಮಾಡಬಹುದು.
Post Office Mobile App ಮತ್ತು IPPB Mobile App ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳು.
ಸಾಮ್ಯತೆ- ಎರಡೂ ಅಪ್ಲಿಕೇಶನ್ ಗಳಲ್ಲಿ ಈ ಮೇಲೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ವ್ಯತ್ಯಾಸಗಳು- IPPB Mobile App ನಲ್ಲಿ NEFT/RTGS/IMPS/AeP ಮೊದಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆದರೆ Post Office Mobile App ನಲ್ಲಿ ಈ ಸೌಲಭ್ಯಗಳು ಇರುವುದಿಲ್ಲ.
ಐಪಿಪಿಬಿಖಾತೆಯಲ್ಲಿ ದಿನದ ವಹಿವಾಟಿನ ಅಂತ್ಯದಲ್ಲಿ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಜಮೆ ಇಡಬಹುದಾಗಿದೆ. ಆದರೆ ಅಂಚೆ ಉಳಿತಾಯ ಖಾತೆಗೆ ಇಂತಹ ಮಿತಿ ಇರುವುದಿಲ್ಲ.
ಕಾಮೆಂಟ್ ಪೋಸ್ಟ್ ಮಾಡಿ