||Dhai Akhar-National Level Letter Writing Competition by India Post || A Complete Guide.
ತಂತ್ರಜ್ಞಾನದ ಇಂದಿನ ದಿನದಲ್ಲಿ ಸಂಪರ್ಕ ಸಾಧನೆಗಳು ದಿನದಿಂದ ದಿನಕ್ಕೆ ಹೊಸ ಆಯಾಮವನ್ನು ಪಡೆಯುತ್ತಿವೆ. ಇಂದು ಒಂದು ಸುದ್ದಿ ಅಥವಾ ವಿಚಾರವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ಇತರರಿಗೆ ತಿಳಿಸಬಹುದು, ಹಿಂದಿನ ದಿನಮಾನಗಳಲ್ಲಿ ಪುರಾತನ ಸಂಪರ್ಕ ಮಾಧ್ಯಮವಾಗಿದ್ದ ಪತ್ರವ್ಯವಹಾರ ಮಾಯವಾಗಿದೆ. ಪತ್ರಲೇಖನ(Letter Writing) ಒಂದು ಕಲೆಯಾಗಿದ್ದು, ವ್ಯಕ್ತಿಯ ಜ್ಞಾನ, ಶಬ್ದಭಂಡಾರ, ಯೋಚನಾಶಕ್ತಿ ಸಮ್ಮಿಲನ ಗೊಳಿಸುವ ಸಾಧನ.
ಇಂತಹ ಪತ್ರಲೇಖನ(Letter Writing) ಕಲೆಯನ್ನು ಪ್ರೋತ್ಸಾಹಿಸಲು ಹಾಗೂ ನಿಮ್ಮೊಳಗಿನ ಬರಹಗಾರನನ್ನು ಗುರುತಿಸಲು ಭಾರತೀಯ ಅಂಚೆ ಇಲಾಖೆ (Department of Post, India) ರಾಷ್ರ್ಟ ಮಟ್ಟದ ಪತ್ರಲೇಖನ ಸ್ಪರ್ಧೆ (National Level Letter Writing Competition) ಯನ್ನು ಏರ್ಪಡಿಸಿದ್ದು, ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಎರಡು ವಯೋಮಿತಿಯ (18 ವರ್ಷದೊಳಗಿನ ಮತ್ತೂ 18 ವರ್ಷ ಮೀರಿದ) ವರ್ಗದಲ್ಲಿ ನಡೆಯಲಿದೆ. ಎರಡು ವಿಭಾಗಗಳಿಗೂ ಪ್ರತ್ಯೇಕ ಪ್ರಶಸ್ತಿಗಳು (Separate Prize Category for each Age Group) ಇದ್ದು, ರಾಜ್ಯ ಅಂಚೆ ವೃತ್ತದ(Circle Level) ಮಟ್ಟದಲ್ಲಿ, ಹಾಗೂ ರಾಷ್ಟ್ರಮಟ್ಟ(National Level) ದಲ್ಲಿ ಎರಡು ವಿಭಾಗಗಳಲ್ಲಿಯೂ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ನೀಡಲಾಗುವುದು. ವಿಶೇಷವಾಗಿ ಶಾಲಾ ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಸ್ಥರು, ಯಾರೇ ಇರಲಿ ನಿಮ್ಮದೇ ಸಮಯವನ್ನು ತೆಗೆದುಕೊಂಡು ಮನೆಯಲ್ಲಿಯೇ ಕುಳಿತು ಪತ್ರವನ್ನು ಬರೆಯಬಹುದು.
🔆ಪತ್ರದ ವಿಷಯ(Subject): ಭಾರತೀಯ ಅಂಚೆ ಇಲಾಖೆ 'ಧೈ ಅಖರ್' ಅಭಿಯಾನದಡಿಯಲ್ಲಿ ಪ್ರತಿವರ್ಷ ಪತ್ರ ಲೇಖನ ಸ್ಪರ್ಧೆ ಏರ್ಪಡಿಸುತ್ತದೆ. ಪ್ರತಿವರ್ಷ ಭಿನ್ನ ಭಿನ್ನ ಶೀರ್ಷಿಕೆಯ ವಿಷಯದ ಮೇಲೆ ಸ್ಪರ್ಧೆ ಇರುತ್ತದೆ.
========================================================================
ಧೈ ಅಖರ್' (Dhai Akhar) ಎಂದರೇನು ?
'ಧೈ ಅಖರ್(Dhai Akhar)' ಎಂಬ ಪದ ಕಬೀರದಾಸ್ ದೋಹೆಯಿಂದ ಆರಿಸಿಕೊಂಡ ಪದವಾಗಿದೆ. 'ಧೈ ಅಖರ್' ಎಂಬ ಪದದ ಶಬ್ದಶಃ ಅರ್ಥ 'ಎರಡೂವರೆ ಅಕ್ಷರ' ಎಂದಾಗುತ್ತದೆ, ಕಬೀರದಾಸರು ತಮ್ಮ ಒಂದು ದೋಹೆಯಲ್ಲಿ ವಿವರಿಸುತ್ತಾ
"ಜಗತ್ತಿನ ಎಲ್ಲ ಪುಸ್ತಕಗಳನ್ನು ಓದಿ ತಿಳಿದವನು ಜ್ಞಾನಿಯಲ್ಲ, 'ಪ್ರೇಮ' ವೆಂಬ ಎರಡೂವರೆ ಅಕ್ಷರದ ಮಹತ್ವ ತಿಳಿದವನೇ ಜ್ಞಾನಿ"
(ಹಿಂದಿಯಲ್ಲಿ ಪ್ರೇಮ್ ಎಂಬುದು ಎರಡೂವರೆ ಅಕ್ಷರದ ಪದವಾಗುತ್ತದೆ) ಎಂದು ತಿಳಿಸುತ್ತ ಜಗತ್ತಿಗೆ ಮಾನವ ಪ್ರೇಮದ ಮಹತ್ತ್ವ ಸಾರಿದ್ದಾರೆ. ಇಂತಹ ಎರಡೂವರೆ ಅಕ್ಷರದ ('ಧೈ ಅಖರ್'-Dhai Akhar) ಆಧಾರವಾಗಿ ಭಾರತೀಯ ಅಂಚೆ ಇಲಾಖೆ ಪ್ರತಿವರ್ಷ ಪತ್ರ ಲೇಖನ ಸ್ಪರ್ಧೆ ಏರ್ಪಡಿಸುತ್ತದೆ.
========================================================================
2019-20 ನೇ ಸಾಲಿನ ವಿಷಯ "ಪ್ರೀತಿಯ ಬಾಪು, ನೀವು ಅಮರ"...!, "Dear Bapu, You are Immortal", "प्रिय बापू , आप अमर है|".
🔆ಭಾಷೆ(Language): ಕನ್ನಡ(Kannada), ಹಿಂದಿ(Hindi),ಇಂಗ್ಲಿಷ್(English) ಭಾಷೆಯನ್ನು ಆಯ್ದುಕೊಂಡು, ಯಾವುದಾದರೂ ಒಂದು ಭಾಷೆಯಲ್ಲಿ ಪತ್ರವನ್ನು ಬರೆಯಬಹುದು.
🔆 ಅವಧಿ : ಸ್ಪರ್ಧೆ ಎರಡರಿಂದ ಮೂರು ತಿಂಗಳುಗಳವರೆಗೂ ತೆರೆದಿರುತ್ತೆ, ಪ್ರಾರಂಭ ದಿನಾಂಕ, ಅಂತಿಮ ದಿನಾಂಕ ಈ ಎಲ್ಲ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತದೆ.
ಪತ್ರ ಲೇಖನ ಸ್ಪರ್ಧೆಯ ಅಂತಿಮ ದಿನಾಂಕವನ್ನು 31/12/2019 ರವರೆಗೂ ವಿಸ್ತರಣೆ ಮಾಡಲಾಗಿದೆ. ಪತ್ರ ಲೇಖನ ಸ್ಪರ್ಧೆಯ ಅಂತಿಮ ದಿನಾಂಕ ವಿಸ್ತರಣೆ
🔆 ಲೇಖನ ಸಾಮಗ್ರಿಗಳು ಮತ್ತು ಪದಗಳ ಮಿತಿ:
- ಸ್ಪರ್ಧಿಗಳು ಅಂಚೆ ಕಛೇರಿಗಳಲ್ಲಿ ಲಭ್ಯವಿರುವ ಅಂತರ್ ದೇಶೀಯ ಪತ್ರಗಳು(ILC-Inland Letter Card) ಮತ್ತು ಲಕೋಟೆಗಳನ್ನು(Envelope) ಬಳಸಿ ಮನೆಯಲ್ಲಿಯೇ ಕುಳಿತು ಪತ್ರಗಳನ್ನು ಬರೆಯಬಹುದು.
- ಅಂತರ್ ದೇಶೀಯ ಪತ್ರದ(ILC-Inland Letter Card) ಮೂಲಕ ಬರೆಯುವ ಸ್ಪರ್ಧೆಗಳು 500 ಪದಗಳ ಮಿತಿ(Word Limit)ಯಲ್ಲಿ ಬರೆಯಬೇಕು .
- ಲಕೋಟೆಯನ್ನು ಬಳಸಿ ಬರೆಯುವ ಸ್ಪರ್ಧಿಗಳು, 1000 ಪದಗಳ ಮಿತಿ(Word Limit) ಯಲ್ಲಿ A4 ಸೈಝಿನ ಬಿಳಿಹಾಳೆಯಲ್ಲಿ ಬರೆದು, ಲಕೋಟೆಗೆ ಸೂಕ್ತ ಅಂಚೆಚೀಟಿಯನ್ನು(stamp) ಲಗತ್ತಿಸಿ ಕಳುಹಿಸಬೇಕು.
🔆 ಪ್ರವೇಶ ಶುಲ್ಕ -ಯಾವುದೇ ನಿಗದಿತ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಉಚಿತ ಪ್ರವೇಶ.
ಕೇವಲ ರೂ.2.5/- ಗೆ ಸಿಗುವ ಅಂತರ್ ದೇಶೀಯ ಪತ್ರಗಳು(ILC-Inland Letter Card)₹.2.5/- Inland Letter Card |
ಅಥವಾ ರೂ.5 ಗೆ ಸಿಗುವ ಲಕೋಟೆಗಳನ್ನು(Embossed Envelope) ಬಳಸಿ ಪತ್ರಗಳನ್ನು ಬರೆಯಬಹುದು.
₹.5/- Embossed Envelope |
🔆 ವಿಶೇಷ ಸೂಚನೆಗಳು:
- ಪ್ರತಿ ಅಂತರ್ ದೇಶಿಯ ಪತ್ರ ಮತ್ತು ಲಕೋಟೆಗಳ ಮೇಲೆ "Entry for Dhai Akhar-" ಎಂಬ ತಲೆ ಬರಹ (Heading on Envelope) ಬರೆಯಬೇಕು.
- ತಲೆಬರಹದ ಕೆಳಗೆ , I declare I am below/above 18 age as on (Notified Date) ಎಂಬ ವಯಸ್ಸಿನ ಸ್ವಯಂ ದೃಢೀಕರಣ(Age Self Declaration) ನೀಡುವ ಅಡಿಬರಹವನ್ನು (Sub Heading) ಬರೆಯಬೇಕು.
- ಪತ್ರಗಳನ್ನು ನೀವು ವಾಸಿಸುವ ವಿಳಾಸಕ್ಕೆ ಸಂಬಂಧಿಸಿದ ಅಂಚೆ ವಿಭಾಗದ ಅಧೀಕ್ಷಕರಿಗೆ ಕಳುಹಿಸಬೇಕು. ಕರ್ನಾಟಕ ಅಂಚೆ ವೃತ್ತದ ಅಂಚೆ ಅಧೀಕ್ಷಕರ ವಿಳಾಸಗಳನ್ನು Website ನಲ್ಲಿ ನೀಡಿದ ಪಟ್ಟಿಯಲ್ಲಿ ತಿಳಿಸಲಾಗಿದೆ. ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ ವಿಳಾಸವನ್ನು ಪಡೆಯಬಹುದು.
- ಪತ್ರಗಳನ್ನು Dhai Akhar ಸ್ಪರ್ಧೆಗೆ ನಿಗದಿಪಡಿಸಿದ ಪ್ರತ್ಯೇಕ ಅಂಚೆಪೆಟ್ಟಿಗೆ(Separate Special Latter Box) ಗೆ ಹಾಕಬೇಕು. ಅಥವಾ ಅಂಚೆ ಕಚೇರಿಯಲ್ಲಿ ಅಂಚೆಪಾಲಕ(Postmaster) ರ ಸುಪರ್ದಿಗೆ ಮುಂದಿನ ಹಂತಕ್ಕೆ ಕಳುಹಿಸಲು ನೀಡಬೇಕು.
🔆ಆಯ್ಕೆ ವಿಧಾನ:
ವಿಭಾಗೀಯ ಮಟ್ಟ(Divisional Level) ದಲ್ಲಿ ಸ್ವೀಕರಿಸಿದ ಎಲ್ಲಾ ಪತ್ರಗಳನ್ನು ವಯೋಮಿತಿ(Below/Above 18 age) ಮತ್ತು ಅಂಚೆ ಸಾಮಗ್ರಿಗೆ (Postal Stationery) (ILC/Envelope) ಅನುಗುಣವಾಗಿ ವಿಂಗಡಿಸಿ, ಪ್ರತಿ ವಿಭಾಗದಲ್ಲಿ ಮೂರು ಉತ್ಕೃಷ್ಟ(Best Three) ಪತ್ರಗಳನ್ನು ರಾಜ್ಯಮಟ್ಟ(Circle Level)ಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪತ್ರಗಳನ್ನು, ರಾಷ್ಟ್ರಮಟ್ಟ(National Level) ದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ರಾಜ್ಯಮಟ್ಟದ ವಿಜೇತರ ಪಟ್ಟಿಯನ್ನು ಆಯಾ ರಾಜ್ಯಗಳ ಅಂಚೆ ವೃತ್ತದ ವೆಬ್ಸೈಟ್ಗಳ ಮೂಲಕ ಘೋಷಿಸಲಾಗುತ್ತದೆ.
🔆 ಪ್ರಶಸ್ತಿ:
- ರಾಜ್ಯಮಟ್ಟದ ಸ್ಪರ್ಧೆ (ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ ಪ್ರತ್ಯೇಕವಾಗಿ)
- ಪ್ರಥಮ ಬಹುಮಾನ : 25000/-
- ದ್ವಿತೀಯ ಬಹುಮಾನ: 10000/-
- ತೃತೀಯ ಬಹುಮಾನ: 05000/-
- ರಾಷ್ಟ್ರ ಮಟ್ಟದ ಸ್ಪರ್ಧೆ (ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ ಪ್ರತ್ಯೇಕವಾಗಿ)
- ಪ್ರಥಮ ಬಹುಮಾನ : 50000/-
- ದ್ವಿತೀಯ ಬಹುಮಾನ: 25000/-
- ತೃತೀಯ ಬಹುಮಾನ: 10000/-
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ಕೊಡಿ.
ಕೃಪೆ: ಭಾರತೀಯ ಅಂಚೆ ಇಲಾಖೆ
Well formulated information about dhai aakkar
ಪ್ರತ್ಯುತ್ತರಅಳಿಸಿThanks... Share this post and encourage to write letter
ಅಳಿಸಿThumba olleya prayathna,,yellaru huridumbisutheve
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ