DDSY
Deen Dayal SPARSH Yojana 


         ಭಾರತೀಯ ಅಂಚೆ ಇಲಾಖೆಯು 6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಸ್ಪರ್ಷ್ -Deen Dayal SPARSH (Scholarship for Promotion of Aptitude and Research in Stamps as a Hobby) ಯೋಜನೆ 2024-25ರ ಅಡಿಯಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     
          ಈ ಯೋಜನೆಯ ಮುಖ್ಯ ಉದ್ದೇಶ ಶಾಲಾ ಮಕ್ಕಳಿಗೆ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸದ ಕುರಿತು ಪ್ರಚಾರ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಯೋಜನೆಯನ್ನು ಭಾರತ ಸರ್ಕಾರದ ವತಿಯಿಂದ ಪ್ರತೀ ವರ್ಷ ಹಮ್ಮಿಕೊಳ್ಳಲಾಗುತ್ತದೆ.

ವಿದ್ಯಾರ್ಥಿ ವೇತನ ಪಡೆಯಲು  ಇರಬೇಕಾದ ಅರ್ಹತೆಗಳು  ಮತ್ತು ಷರತ್ತುಗಳು: 


ದೀನ್ ದಯಾಳ್ ಸ್ಪರ್ಶ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು,

6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಕನಿಷ್ಟ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ   ಶೇಕಡಾ ಐದರಷ್ಟು ರಿಯಾಯಿತಿ   ಇದ್ದು,    ಹಿಂದಿನ ತರಗತಿಯಲ್ಲಿ ಶೇಕಡಾ 55 ರಷ್ಟು  ಅಂಕಗಳನ್ನು ಪಡೆದು ಉತ್ತೀರ್ಣರಾದವರು ಕೂಡ, ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಅಂಚೆ ಚೀಟಿ ಸಂಗ್ರಹಣೆ ಖಾತೆ(Philately Deposit Account-PDA) ಹೊಂದಿರಬೇಕು

 ಅಥವಾ ಶಾಲೆಯಲ್ಲಿ ಫಿಲಾಟಲಿ ಕ್ಲಬ್ (School Philately Club) ಇದ್ದಲ್ಲಿ ಅದರ ಸದಸ್ಯರಾಗಿರಬೇಕು, ಜೊತೆಗೆ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸದಲ್ಲಿ ಆಸಕ್ತಿ ಹೊಂದಿರಬೇಕು.

ಆಯ್ಕೆ ವಿಧಾನ:


ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಲು ಮೊದಲ ಹಂತದಲ್ಲಿ ಲಿಖಿತ ರೂಪದಲ್ಲಿ ಫಿಲಾಟಲಿ ಕ್ವಿಜ್ ಪರೀಕ್ಷೆಯನ್ನು ಬರೆಯಬೇಕು. ಇಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಎರಡನೇ ಹಂತದಲ್ಲಿ ಫಿಲಾಟಲಿ ಪ್ರಾಜೆಕ್ಟ್ ನೀಡಲಾಗುವುದು. ಇದರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರಿಗೆ ವಾರ್ಷಿಕ ರೂ.6000/- ರೂ.ಗಳನ್ನು ಪ್ರತಿ ತಿಂಗಳು 500/- ರೂಪಾಯಿಗಳ ವಿದ್ಯಾರ್ಥಿವೇತನವನ್ನು ಅಂಚೆ ಇಲಾಖೆ ವತಿಯಿಂದ ನೀಡಲಾಗುವುದು.

ಅರ್ಜಿಗಳನ್ನು  ನಿಮ್ಮ ಸಮೀಪದ ಅಂಚೆ ಕಚೇರಿಗಳ ಮೂಲಕ ಸಂಗ್ರಹಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಿಸಿದ  ಅಂಚೆ ವಿಭಾಗದ  ಅಧೀಕ್ಷಕರಿಗೆ, ನೊಂದಾಯಿತ ಅಥವಾ ಸ್ಪೀಡ್ ಪೋಸ್ಟ್ ಅಂಚೆಯ ಮೂಲಕ ಅಂಚೆ ಇಲಾಖೆ ನಿಗದಿಪಡಿಸಿದ ದಿನಾಂಕದ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಂಚೆ ಇಲಾಖೆಯ ವೆಬ್‍ಸೈಟ್ www.indiapost.gov.in ಮತ್ತು www.karnatakapost.gov.in ಭೇಟಿ ನೀಡಬಹುದು.


ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಿ(Read this post in English):  Philately Scholarship Scheme "DDSY"

 Courtesy : India  Post


2 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು