Stamps of Karnataka |
ಫಿಲಾಟಲಿ (Philately) ಅಂದರೆ ಏನು ? ಎಂಬ ಪ್ರಶ್ನೆ ಬಂದಾಗ ಸಂಕ್ಷೀಪ್ತ ಪದಗಳಲ್ಲಿ ಹೇಳುವುದಾದರೆ ಅಂಚೆ ಚೀಟಿಗಳ ಸಂಗ್ರಹಣೆ ಮತ್ತು ಅಧ್ಯಯನ (Philately is collection and study of Stamps) ಎಂದು ಹೇಳೆಬಹುದು. ಆದರೆ ವಿಸ್ತೃತ ರೂಪದಲ್ಲಿ ನೋಡುವುದಾದರೆ ಫಿಲಾಟಲಿ ಕೇವಲ ಅಂಚೆ ಚೀಟಿಗಳ ಸಂಗ್ರಹಣೆ ಮಾತ್ರವಲ್ಲ, ಫಿಲಾಟಲಿಯಲ್ಲಿ ಅಂಚೆ ಚೀಟಿಗಳ ಸಂಗ್ರಹಣೆ (Stamps Collection), ಅಂಚೆ ಚೀಟಿಗಳ ಸಂಶೋಧನೆ (Stamps Research), ಅಂಚೆ ಚೀಟಿಗಳ ಪ್ರಸ್ತುತಪಡಿಸುವಿಕೆ (Stamps Presentation), ಅಂಚೆ ಚೀಟಿಗಳ ಪ್ರದರ್ಶಿಸುವಿಕೆ (Stamps Exhibition) ಮತ್ತು ಇತರೆ ಫಿಲಾಟೆಲಿ ಸಂಬಂಧಿತ ವಸ್ತುಗಳನ್ನು ಸಂಗ್ರಹಿಸುವುದು, ಈ ಎಲ್ಲ ಹಂತಗಳನ್ನು ಒಳಗೊಂಡ ಒಂದು ಸಮಗ್ರ ಹವ್ಯಾಸವಾಗಿದೆ.
ಇದು ಜಗತ್ತಿನ ಅತಿ ಹೆಚ್ಚು ಜ್ಞಾನವರ್ಧಕ ಮತ್ತು ಶಿಕ್ಷಣ ನೀಡುವ ಹವ್ಯಾಸದ ಒಂದು ಭಾಗ. ಇದು ದೇಶ, ಸಂಸ್ಕೃತಿ,ಇತಿಹಾಸ, ವಿಜ್ಞಾನ ತಂತ್ರಜ್ಞಾನ, ಮತ್ತು ಪ್ರಕೃತಿಯ ಬಗ್ಗೆ ನಿಮ್ಮ ಜ್ಞಾನವನ್ನು ಫಲಪ್ರದವಾಗಿಸಲು ಸಹಾಯವಾಗುತ್ತದೆ.ಇದು ತಾಯಿನಾಡಿನ ಬಗ್ಗೆ ತಿಳಿಯಲು ಮತ್ತು ನಿಮ್ಮ ಬಿಡುವಿನ ವೇಳೆಯನ್ನು ಫಲಪ್ರದವಾಗಿಸಲು ಸಹಾಯವಾಗುತ್ತದೆ.
ಫಿಲಾಟಲಿ ಹವ್ಯಾಸದ ವೈಶಿಷ್ಟ್ಯಗಳು
ಅಂಚೆ ಚೀಟಿ ಕೇವಲ ಕಾಗದದ ಚೂರು ಅಲ್ಲ, ಅದಕ್ಕೆ ನಿರ್ದಿಷ್ಟಪಡಿಸಿದ ಚಲಾವಣಾ ಮೌಲ್ಯವಿದೆ (Currency Value). ಕಾಗದಗಳಿಂದ ಮಾಡಿದ ಕರೆನ್ಸಿ ನೋಟುಗಳಿಗೆ (Currency Notes) ಮೌಲ್ಯ(Value) ವಿರುವಂತೆ ವಿವಿಧ 'ಡೇನೋಮಿನಷನ್' ಗಳಲ್ಲಿ (0.25, 0.50, 0.75, 1,2,3,4,5,10, 12, 15, 20, 22, 25, 30, 41, 50 etc ) ಅಂಚೆ ಚೀಟಿಗಳು ಲಭ್ಯವಿದ್ದು, ಕರೆನ್ಸಿ ನೋಟಿಗೆ ಸಮನಾದ ಮೊತ್ತದ ಮೌಲ್ಯವನ್ನು ಹೊಂದಿವೆ.
ಕೆಲವು ವಿರಳ ಅಂಚೆ ಚೀಟಿಗಳು ಅವುಗಳ ಲಭ್ಯತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಅವುಗಳ ಮುಖಬೆಲೆಗಿಂತ ಹೆಚ್ಚಿನ ಬೆಲೆಗೆ ಹರಾಜಾದ ಉದಾಹರಣೆಗಳಿವೆ. 1948 ರಲ್ಲಿ ಬಿಡುಗಡೆಯಾದ ಮಹಾತ್ಮಾ ಗಾಂಧೀಜಿಯವರ 10 ರೂಪಾಯಿ ಮುಖಬೆಲೆಯ ಅಂಚೆ ಚೀಟಿಯ ಇಂದಿನ ಮಾರುಕಟ್ಟೆ ಬೆಲೆ ಸರಿಸುಮಾರು 38೦೦೦ ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗುತ್ತದೆ. ಅಂದರೆ ಇಂದು ನೀವು ಅಂಚೆ ಚೀಟಿಯ ಮೇಲೆ ಹೂಡಿಕೆ ಮಾಡಿದ್ದಲ್ಲಿ ಅದರ ಭವಿಷ್ಯದ ಬೆಲೆ ಸಾವಿರ ಸಾವಿರ ಪಟ್ಟು ಅಧಿಕವಾಗಬಹುದು.
ಕೇವಲ ಬಳಸದೆ ಇರುವ (Mint Stamps) ಅಂಚೆ ಚೀಟಿಯ ಬೆಲೆ ಮಾತ್ರವಲ್ಲ, ಬಳಸಿದ ಅಂಚೆ ಚೀಟಿಗಳು (Used Stamps) ಕೂಡ ಹೆಚ್ಚಿನ ಬೆಲೆಗೆ ಹರಾಜಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಂಚೆ ಚೀಟಿಯ ಮುಖ ಬೆಲೆಯ ಅರ್ಧದಷ್ಟು ಅಥವಾ ಸಮನಾದ ಅಥವಾ ಹೆಚ್ಚಿನ ಬೆಲೆಗೆ, ಇನ್ನು ಕೆಲವು ಸಂದರ್ಭಗಳಲ್ಲಿ ನೂರು,ಸಾವಿರಪಟ್ಟು ಅಧಿಕ ಬೆಲೆಗೆ ಮಾರಾಟವಾದ ನಿದರ್ಶನಗಳು ಹೆಚ್ಚಿವೆ. ಆದ್ದರಿಂದ ಒಂದೊಳ್ಳೆ ಹವ್ಯಾಸದ ಖುಷಿಯೊಂದಿಗೆ ಫಿಲಾಟಲಿಯನ್ನು ನಿಮ್ಮ ಹಣ ಹೂಡಿಕೆಯ ಮಾರ್ಗವಾಗಿಯೂ ಪರಿಗಣಿಸಬಹುದು.
ನಾವೆಲ್ಲರೂ ಕೆಲವೊಂದು ವಸ್ತುಗಳನ್ನು ಸಂಪಾದಿಸಲು ಮತ್ತು ಸಂಗ್ರಹಿಸಲು ಬಯಸುತ್ತೇವೆ, ಆದರೆ ಈ ಸಂಗ್ರಹಣ ಕ್ರಿಯೆಯ ಜೊತೆಗೆ ನಮ್ಮ ಜ್ಞಾನವು ವೃದ್ಧಿಯಾಗುತ್ತಾ ಹೋದರೆ, ಅದು ನಿಜಕ್ಕೂ ನಮಗೆ ಭವಿಷ್ಯದಲ್ಲಿ ಸಹಾಯಮಾಡುತ್ತದೆ. ಅದಕ್ಕಾಗಿಯೇ ಫಿಲಾಟೆಲಿಯನ್ನು ಬಹು ಉಪಯುಕ್ತ ಹವ್ಯಾಸ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅಂಚೆ ಚೀಟಿ ಸಂಗ್ರಹ ಹವ್ಯಾಸವನ್ನು "ಹವ್ಯಾಸಗಳ ರಾಜ" & 'ರಾಜರ ಹವ್ಯಾಸ' ಎಂದು ಕರೆಯುತ್ತಾರೆ.
ಏನನ್ನು ಸಂಗ್ರಹಿಸಬೇಕು?
ಈ ಪ್ರಶ್ನೆಯನ್ನು ಪ್ರತಿಯೊಬ್ಬ ಆರಂಭಿಕ ಸಂಗ್ರಹಕಾರನ್ನು ಗಲಿಬಿಲಿಗೊಳಿಸುತ್ತದೆ. ನಿಮ್ಮ ಸಂಗ್ರಹಣೆಯಲ್ಲಿ ನೀವೇನು ಹೊಂದಲು ಬಯಸುತ್ತೀರಿ? ಎಂದು ನಿರ್ಧರಿಸುವುದೇ ಒಂದು ಮುಖ್ಯ ವಿಷಯ. ಇಲ್ಲಿ ಸಾಧ್ಯತೆಗಳು ಅಪಾರ.
*ಚೀಟಿಯನ್ನು ಮುದ್ರಣಗೊಂಡ ರೀತಿಯಲ್ಲಿ (ಬಳಸದೆ ಇರುವ ಸ್ಥಿತಿಯಲ್ಲಿ) ಅಥವಾ ಬಳಸಿದ ಅಂಚೆಚೀಟಿಗಳ ರೀತಿಯಲ್ಲಿ ಸಂಗ್ರಹಿಸಬಹುದು.
*ಅಂಚೆಚೀಟಿಗಳನ್ನು ಜೋಡಿಯಾಗಿ 4ರ ಗುಂಪಾಗಿ ಉದ್ದುದ್ದ ಪಟ್ಟಿ ಗಳಾಗಿ ಅಥವಾ ಇನ್ನಿತರ ರೀತಿಯಲ್ಲಿ ಸಂಗ್ರಹಿಸಬಹುದಾಗಿದೆ.
*ಅನಂತರ FDC (First Day Cover-ಮೊದಲದಿನದ ಲಕೋಟೆ ) ಮತ್ತು Brocher-ಬ್ರೋಚರ್( ಮಾಹಿತಿ ಕೈಪಿಡಿ) ಹೊತ್ತಿಗೆಗಳನ್ನು ಸಂಗ್ರಹಿಸಬಹುದು.
FDCಗಳನ್ನು ಹೊಸ ಸ್ಮರಣಾರ್ಥ ಅಂಚೆಚೀಟಿಗಳು ಅಂದರೆ ಹೊರತರಲಾಗುತ್ತದೆ. ಇವುಗಳನ್ನು ಅಂಚೆಯ ಮೂಲಕ ರದ್ದುಪಡಿಸಿದ ಅಥವಾ ರದ್ದುಪಡಿಸಿದ ರೀತಿಯಲ್ಲಿ ಸಂಗ್ರಹಿಸಬಹುದು ಹಾಗೆಯೇ ಪ್ರತಿ ಅಂಚೆಚೀಟಿ ಬಿಡುಗಡೆಯ ಜೊತೆಗೆ ಬರುತ್ತಿರುವ ಬ್ರೋಚರ್ ಮಾಹಿತಿ ಕೈಪಿಡಿಯಲ್ಲಿ ಬಿಡುಗಡೆಯಾದ ಬಗ್ಗೆ ಮಾಹಿತಿ ಇರುತ್ತದೆ. ಇವುಗಳನ್ನು ಸಹ ರದ್ದುಪಡಿಸಿದ ಅಥವಾ ರದ್ದುಪಡಿಸಿದೆ ಇರುವ ಅಂಚೆ ಚೀಟಿಯೊಂದಿಗೆ ಸಂಗ್ರಹಿಸಬಹುದು.
ಇವುಗಳಲ್ಲದೆ ಅಂಚೆ ಸಾಮಗ್ರಿಗಳಾದ ಅಂಚೆಕಾರ್ಡ್, ಅಂತರ್ದೇಶಿ ಪತ್ರ, ಏರೋಗ್ರಾಮಗಳು, ಅಂಚೆ ಲಕೋಟೆಗಳು, ಮೇಘದೂತ ಕಾರ್ಡುಗಳು ಸಹ ಸಂಗ್ರಹದ ಭಾಗವಾಗಬಹುದು.
ಹೇಗೆ ಸಂಗ್ರಹಿಸಬೇಕು?
ಸಂಗ್ರಹಣೆಯನ್ನು ಮೂರು ವಿಧಗಳಲ್ಲಿ ಮಾಡಬಹುದು ಅವುಗಳೆಂದರೆ;
1. ಸಾಮಾನ್ಯ ಸಂಗ್ರಹಣೆ: ಇದು ಎಲ್ಲಾ ದೇಶಗಳ ಅಂಚೆಚೀಟಿಗಳನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿರುತ್ತದೆ:
2. ದೇಸಿ ಸಂಗ್ರಹಣೆ: ಇದು ನಿರ್ದಿಷ್ಟ ದೇಶದ ಅಂಚೆ ಚೀಟಿ ಸಂಗ್ರಹಿಸುವಿಕೆ ಸಂಬಂಧಿಸಿರುತ್ತದೆ.
3.ವಿಷಯಾಧಾರಿತ ಸಂಗ್ರಹಣೆ: ಇದು ಒಂದು ಆಯ್ಕೆಮಾಡಿದ ಅಥವಾ ವಿಷಯಕ್ಕೆ ಸಂಬಂಧಿಸಿದ ಸಂಗ್ರಹಣೆ ಪಕ್ಷಿ ಕ್ರೀಡೆ ಚಿಟ್ಟೆ ರೈಲ್ವೆ ಅಂತರಿಕ್ಷಯಾನ ಸಂಗೀತ ಇತ್ಯಾದಿಗಳಿಗೆ ಸಂಬಂಧಿಸಿರುತ್ತದೆ ಈ ರೀತಿ ಸಂಗ್ರಹಣೆಯು ಸಂಗ್ರಹಣಾ ಕಾರಣ ಕಲ್ಪನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಕೆ ಸಂಗ್ರಹಿಸಿದರೆ ಸಾಲದು ನಿಮ್ಮ ಬಳಿ ಇರುವ ಪ್ರತಿಯೊಂದು ಚೀಟಿಯ ಬಗ್ಗೆ ವಿಶ್ಲೇಷಿಸಿ ಮತ್ತು ಅಧ್ಯಯನ ಮಾಡಿ ಹಂಚಿಕೆಗೆ ಸಂಬಂಧಿಸಿದ ಅಥವಾ ಅಂಚೆ ಚೀಟಿ ಬಿಡುಗಡೆ ಮಾಡಿದ ದೇಶಕ್ಕೆ ಸಂಬಂಧಿಸಿದ ಕುರಿತಾಗಿ ಕಲಿತುಕೊಳ್ಳಬೇಕು ಆಗ ನಿಮ್ಮನ್ನು ಇತಿಮಿತಿ ಇಲ್ಲದೆ ವಿಸ್ತಾರವಾಗುತ್ತದೆ.
ಒಬ್ಬ ಕುಶಲ ಅಂಚೆಚೀಟಿ ಸಂಗ್ರಾಹಕರ ಅಂತಿಮ ಗುರಿಯೆಂದರೆ ಸಂಶೋಧಿತ ಅಂಚೆಚೀಟಿಗಳ ಪ್ರದರ್ಶಿಕೆಗಳನ್ನು ಹೊಂದುವುದು ಅಂತಹ ಅಂಚೆಚೀಟಿಗಳ ಪ್ರದರ್ಶಿಕೆಗಳನ್ನು ಸಾಮಾನ್ಯವಾಗಿ ಬೃಹತ್ ಅಂಚೆಚೀಟಿ ಪ್ರದರ್ಶನಗಳಲ್ಲಿ ಕಾಣುತ್ತೇವೆ,ಮತ್ತು ಅಂತಹ ಪ್ರದರ್ಶನಗಳನ್ನು ತಯಾರಿಸುವಲ್ಲಿ ಸಂಗ್ರಹಕ ತೆಗೆದುಕೊಂಡ ಶ್ರಮವನ್ನುನೋಡಿದರೆ ನಿಮಗೆ ಆಶ್ಚರ್ಯವಾಗಬಹುದು, ಅಂತಹ ಪ್ರದರ್ಶಿಕೆಗಳ ಮುಖಬೆಲೆ ಮಹತ್ವವಲ್ಲ ಅವುಗಳನ್ನು ತಯಾರಿಸುವಲ್ಲಿ ಒಳಗೊಂಡಿರುವ ಪ್ರಯತ್ನ ಮುಖ್ಯ.
ಅಂಚೆ ಚೀಟಿ ಸಂಗ್ರಹಿಸುವ ಮಾರ್ಗಗಳು:
*ನಿಮ್ಮ ಮನೆಬಾಗಿಲಿಗೆ, ಕಚೇರಿಗಳಿಗೆ, ಶಾಲೆಗಳಿಗೆ ಬರುವ ಪತ್ರಗಳ ಪಾರ್ಸಲ್ ಗಳ ಮೇಲೆ ಅಂಟಿಸಿರುವ ಅಂಚೆಚೀಟಿಗಳನ್ನು ಬೇರ್ಪಡಿಸಿ ಸಂಗ್ರಹಿಸಬಹುದು.
*ಪ್ರಧಾನ ಅಂಚೆ ಕಚೇರಿಯಲ್ಲಿ PDA Philately Deposit Account ತೆರೆಯುವ ಮೂಲಕ ಸಂಗ್ರಹಿಸಬಹುದು. ಈ ಖಾತೆಯ ಮೂಲಕ ಹೊಸದಾಗಿ ಬಿಡುಗಡೆಯಾದ ಅಂಚೆಚೀಟಿ ಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು.
* Post Crossing ಎಂಬ ವಿನೂತನ ಹವ್ಯಾಸದ ಮೂಲಕ ವಿದೇಶಿ ನಾಗರಿಕರೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡು ವಿದೇಶಿ ಅಂಚೆಚೀಟಿ ಗಳೊಂದಿಗೆ ಪಿಚ್ಚರ್ ಪೋಸ್ಟ್ ಕಾರ್ಡುಗಳನ್ನು ಕೂಡ ಸಂಗ್ರಹಿಸಬಹುದು.
* ಈ ಪೋಸ್ಟ್ ಆಫೀಸ್ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮೂಲಕ ತರಿಸಿಕೊಳ್ಳಬಹುದು.
* ಪ್ರಧಾನ ಅಂಚೆ ಕಚೇರಿಗಳ ಫಿಲಾಟೆಲಿ ಬ್ಯೂರೋ ಮೂಲಕ ಲಭ್ಯವಿರುವ ಅಂಚೆಚೀಟಿಗಳನ್ನು ಸಂಗ್ರಹಿಸಬಹುದು.
* ಖಾಸಗಿ ಅಂಚೆ ಚೀಟಿ ಸಂಗ್ರಹ ಮತ್ತು ಸಗಟುಗಾರರ ಮೂಲಕ ಸಂಗ್ರಹಿಸಬಹುದು.
* ಅಂಚೆ ಇಲಾಖೆ ನಿಗದಿತ ಅವಧಿಯ ಮಿತಿಯಲ್ಲಿ ಜಿಲ್ಲಾ,ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಚೆಚೀಟಿ ಪ್ರದರ್ಶನ ಕೂಟಗಳನ್ನು ಏರ್ಪಡಿಸುತ್ತಾರೆ, ಈ ಸಂದರ್ಭಗಳಲ್ಲಿ ಅಂಚೆಚೀಟಿ ಸಂಗ್ರಹಣಾ ಕೌಂಟರುಗಳನ್ನು ಇಲಾಖೆಯ ವತಿಯಿಂದ ಮತ್ತು ಖಾಸಗಿ ಮಾರಾಟಗಾರರು ಅಂಚೆಚೀಟಿ ಮಾರಾಟ ಮಳಿಗೆಯ ಮೂಲಕ ಫಿಲಾಟೆಲಿ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿರುತ್ತಾರೆ ಈ ಸಂದರ್ಭವನ್ನು ಬಳಸಿಕೊಂಡು ಅಂಚೆಚೀಟಿಗಳನ್ನು ಸಂಗ್ರಹಿಸಬಹುದು.
ಒಂದು ಸಣ್ಣ ಅಂಚೆಚೀಟಿ ಮಹತ್ತರ ವಿಚಾರಗಳ ಭಂಡಾರವಾಗಿದೆ. ಇದು ಸಮಯದ ಸದುಪಯೋಗವನ್ನು ಕಲಿಸಿಕೊಡುತ್ತದೆ. ಅಂಚೆಚೀಟಿಗಳು ಖುಷಿಯನ್ನು ಕೊಡುವ ಮೂಲಕ ಶಿಕ್ಷಣವನ್ನು ನೀಡುವ ಅತ್ಯಮೂಲ್ಯ ಮೂಲವಾಗಿದೆ. ಅಂಚೆಚೀಟಿ ಸಂಗ್ರಹಣೆ ಹವ್ಯಾಸವನ್ನು ವಯಸ್ಸಿನ ಭೇದವಿಲ್ಲದೆ ಎಲ್ಲರೂ ತೊಡಗಿಸಿಕೊಳ್ಳಬಹುದು. ಆದ್ದರಿಂದ ನಿಮ್ಮ ಸಮೀಪದ ಪ್ರಧಾನ ಅಂಚೆ ಕಚೇರಿಯನ್ನು ಇಂದೇ ಸಂದರ್ಶಿಸಿ. ಅಂಚೆ ಕಚೇರಿಯಲ್ಲಿ ಒಂದು ಫಿಲಾಟೆಲಿ ಡೆಪೋಸಿಟ್ ಖಾತೆಯನ್ನು ತೆರೆಯಿರಿ.
Courtesy : India Post
ಕಾಮೆಂಟ್ ಪೋಸ್ಟ್ ಮಾಡಿ