Dhai Akhar




India Post Latest Logo Dak Seva Jan Seva

ಭಾರತೀಯ ಅಂಚೆ ಇಲಾಖೆ ಹಾಗೂ ಕರ್ನಾಟಕ  ಅಂಚೆ ವೃತ್ತವು ಪ್ರತಿ ವರ್ಷ  ನಡೆಸುವ ರಾಷ್ಟ್ರ ಮಟ್ಟದ ಸ್ಪರ್ಧೆ “ಢಾಯಿ ಆಖರ್” ಪತ್ರ ಲೇಖನ ಅಭಿಯಾನದಲ್ಲಿ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಭಾಗವಹಿಸಲು ಕರೆ ನೀಡಿದೆ.

 

ಸ್ಪರ್ಧೆಯ ಶೀರ್ಷಿಕೆ: 

ಬರವಣೆಗೆಯ ಆನಂದ: ಡಿಜಿಟಲ್ ಯುಗದಲ್ಲಿ ಪತ್ರಗಳ  ಮಹತ್ವ”, The Joy of Writing: Importance of Letters in a Digital Age”, “लेखन का आनंद: डिजिटल युग में पत्रों का महत्व  ಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ.  ಕನ್ನಡ, ಹಿಂದಿ, ಇಂಗ್ಲೀಶ್ ಯಾವುದರೂ ಒಂದು ಭಾಷೆಯಲ್ಲಿ ಕೈ ಬರಹದ ಮುಖೇನ ಪತ್ರವನ್ನು ಬರೆಯಬಹುದು. ಕಡ್ಡಾಯವಾಗಿ ಕೈ ಬರಹದ ಲೇಖನಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಅವಧಿ :

  ಅಭಿಯಾನವು ದಿನಾಂಕ ೧೪.೦೯.೨೦೨೪  ರಿಂದ  ಪ್ರಾರಂಭವಾಗಿ ದಿನಾಂಕ ೧೪.೧೨.೨೦೨೪ ವರಗೆ ತೆರದಿರುತ್ತದೆ. ನಂತರದ ದಿನಾಂಕದಲ್ಲಿ ಸ್ವೀಕರಿಸಿದ ಪತ್ರ ಗಳನ್ನು ಸ್ವೀಕರಸಲಾಗುವುದಿಲ್ಲ.  

ಲೇಖನ ಸಾಮಗ್ರಿಗಳು ಮತ್ತು   ಪದಗಳ ಮಿತಿ: 

  • ಸ್ಪರ್ಧಿಗಳು  ಅಂಚೆ ಕಛೇರಿಗಳಲ್ಲಿ ಲಭ್ಯವಿರುವ  ಅಂತರ್ ದೇಶೀಯ ಪತ್ರಗಳು (ILC-Inland Letter Card) ಮತ್ತು  ಲಕೋಟೆಗಳನ್ನು (Envelope) ಬಳಸಿ ಪತ್ರಗಳನ್ನು ಬರೆಯಬಹುದು.

  • ಅಂತರ್ ದೇಶೀಯ ಪತ್ರದ (ILC-Inland Letter Card) ಮೂಲಕ ಬರೆಯುವ ಸ್ಪರ್ಧೆಗಳು  500 ಪದಗಳ ಮಿತಿ (Word Limit)ಯಲ್ಲಿ ಬರೆಯಬೇಕು. 

  • ಲಕೋಟೆಯನ್ನು ಬಳಸಿ ಬರೆಯುವ ಸ್ಪರ್ಧಿಗಳು,  1000 ಪದಗಳ ಮಿತಿ (Word Limit) ಯಲ್ಲಿ  A4 ಸೈಝಿನ ಬಿಳಿಹಾಳೆಯಲ್ಲಿ ಬರೆದು ಲಕೋಟೆಗೆ ಸೂಕ್ತ ಅಂಚೆಚೀಟಿಯನ್ನು(stamp) ಲಗತ್ತಿಸಿ  ಕಳುಹಿಸಬೇಕು.

ಪ್ರವೇಶ ಶುಲ್ಕ 

     ಯಾವುದೇ ನಿಗದಿತ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಉಚಿತ ಪ್ರವೇಶ. ಕೇವಲ ಲೇಖನ ಸಾಮಗ್ರಿಗಳಾದ ಅಂತರ್ ದೇಶೀಯ ಪತ್ರ (ILC-Inland Letter Card) ಅಥವಾ  ಲಕೋಟೆ (Envelope) ಖರೀದಿಸಬೇಕು. 

ವಯೋಮಿತಿ : 

      ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ಸ್ಪರ್ಧೆಯು ಎರಡು  ವಯೋಮಿತಿಯ (18 ವರ್ಷದೊಳಗಿನ  ಮತ್ತು  18 ವರ್ಷ ಮೀರಿದ)  ವರ್ಗದಲ್ಲಿ ನಡೆಯಲಿದೆ.  ಎರಡು ವಿಭಾಗಗಳಿಗೂ ಪ್ರತ್ಯೇಕ ಪ್ರಶಸ್ತಿಗಳು (Separate Prize Category for each Age Group) ಇದ್ದು,   ರಾಜ್ಯ ಅಂಚೆ ವೃತ್ತದ(Circle Level) ಮಟ್ಟದಲ್ಲಿಹಾಗೂ  ರಾಷ್ಟ್ರಮಟ್ಟ(National Level) ದಲ್ಲಿ  ಎರಡು ವಿಭಾಗಗಳಲ್ಲಿಯೂ ಪ್ರತ್ಯೇಕವಾಗಿ  ಪ್ರಶಸ್ತಿಗಳನ್ನು ನೀಡಲಾಗುವುದು.  ವಿಶೇಷವಾಗಿ ಶಾಲಾ ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು, ಗೃಹಿಣಿಯರುಉದ್ಯೋಗಸ್ಥರುಯಾರೇ ಇರಲಿ ಮ್ಮದೇ ಸಮಯವನ್ನು ತೆಗೆದುಕೊಂಡು  ಮನೆಯಲ್ಲಿಯೇ ಕುಳಿತು  ಪತ್ರವನ್ನು  ಬರೆಯಬಹುದು.


ಆಯ್ಕೆ ವಿಧಾನ: 

    ವಿಭಾಗೀಯ ಮಟ್ಟ(Divisional Level) ದಲ್ಲಿ ಸ್ವೀಕರಿಸಿದ ಎಲ್ಲಾ ಪತ್ರಗಳನ್ನು  ವಯೋಮಿತಿ (Below/Above 18 age) ಮತ್ತು  ಅಂಚೆ ಸಾಮಗ್ರಿಗೆ (Postal Stationery) (ILC/Envelope) ಅನುಗುಣವಾಗಿ  ವಿಂಗಡಿಸಿಪ್ರತಿ ವಿಭಾಗದಲ್ಲಿ ಮೂರು ಉತ್ಕೃಷ್ಟ(Best Three) ಪತ್ರಗಳನ್ನು  ರಾಜ್ಯಮಟ್ಟ(Circle Level)ಕ್ಕೆ ಆಯ್ಕೆ ಮಾಡಿ  ಕಳುಹಿಸಲಾಗುತ್ತದೆ.   ರಾಜ್ಯ ಮಟ್ಟದಲ್ಲಿ  ಪ್ರಶಸ್ತಿ ಪಡೆದ ಪತ್ರಗಳನ್ನು,  ರಾಷ್ಟ್ರಮಟ್ಟ (National Level) ದ ಸ್ಪರ್ಧೆಗೆ  ಕಳುಹಿಸಲಾಗುತ್ತದೆ.  ರಾಜ್ಯಮಟ್ಟದ  ವಿಜೇತರ ಪಟ್ಟಿಯನ್ನು ಆಯಾ ರಾಜ್ಯಗಳ ಅಂಚೆ ವೃತ್ತದ  ವೆಬ್ಸೈಟ್ಗಳ ಮೂಲಕ  ಘೋಷಿಸಲಾಗುತ್ತದೆ.

   ಬಹುಮಾನ

           ರಾಜ್ಯಮಟ್ಟದ  ಸ್ಪರ್ಧೆ  (ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ  ಪ್ರತ್ಯೇಕವಾಗಿ)

·      ರಾಷ್ಟ್ರ ಮಟ್ಟದ ಸ್ಪರ್ಧೆ (ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ  ಪ್ರತ್ಯೇಕವಾಗಿ)

ಪ್ರಥಮ   

        25,000/-

        50,000/-

ದ್ವಿತೀಯ

  10,000/-

        25,000/-

ತೃತೀಯ

         5,000/-

        10,000/-

 

ಸೂಚನೆಗಳು:

·         ಪ್ರತಿ  ಅಂತರ್ ದೇಶಿಯ ಪತ್ರ ಮತ್ತು ಲಕೋಟೆಗಳ ಮೇಲೆ "Entry for Dhai Akhar-"  ಎಂಬ ತಲೆ ಬರಹ (Heading on Envelope) ಬರೆಯಬೇಕು.

·        ತಲೆಬರಹದ ಕೆಳಗೆI declare I am below/above 18 age as on (Notified Date) ಎಂಬ ವಯಸ್ಸಿನ  ಸ್ವಯಂ ದೃಢೀಕರಣ(Age Self Declaration)  ನೀಡುವ ಅಡಿಬರಹವನ್ನು  (Sub Heading) ಬರೆಯಬೇಕು.


·         ಪತ್ರಗಳನ್ನು ನೀವು ವಾಸಿಸುವ ವಿಳಾಸಕ್ಕೆ ಸಂಬಂಧಿಸಿದ  ಅಂಚೆ ವಿಭಾಗದ ಅಧೀಕ್ಷಕರಿಗೆ   ಕಳುಹಿಸಬೇಕು.  ಕರ್ನಾಟಕ  ಅಂಚೆ ವೃತ್ತದ  ಅಂಚೆ ಅಧೀಕ್ಷಕರ  ವಿಳಾಸಗಳನ್ನು  Website; https://karnatakapost.gov.in  ನಲ್ಲಿ  ನೀಡಿದ ಪಟ್ಟಿಯಲ್ಲಿ ತಿಳಿಸಲಾಗಿದೆ.  ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ ವಿಳಾಸವನ್ನು ಪಡೆಯಬಹುದು.

·         ಪತ್ರಗಳನ್ನು Dhai Akhar  ಸ್ಪರ್ಧೆಗೆ ನಿಗದಿಪಡಿಸಿದ  ಪ್ರತ್ಯೇಕ ಅಂಚೆಪೆಟ್ಟಿಗೆ(Separate Special Latter Box) ಗೆ  ಹಾಕಬೇಕು. ಅಥವಾ  ಅಂಚೆ ಕಚೇರಿಯಲ್ಲಿ  ಅಂಚೆಪಾಲಕ(Postmaster)   ಸುಪರ್ದಿಗೆ   ಮುಂದಿನ ಹಂತಕ್ಕೆ   ಕಳುಹಿಸಲು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿಗೆ   ಭೇಟಿ ಕೊಡಿ.


Post a Comment

ನವೀನ ಹಳೆಯದು