Technology Bank of the Year Certificate
 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇಂಡಿಯನ್ ಬ್ಯಾಂಕುಗಳ ಸಂಘದ 15 ನೇ ವಾರ್ಷಿಕ ಬ್ಯಾಂಕಿಂಗ್ ತಂತ್ರಜ್ಞಾನ ಪ್ರಶಸ್ತಿ 2020 ರಲ್ಲಿ ಪಾವತಿ ಬ್ಯಾಂಕುಗಳಲ್ಲಿ "ವರ್ಷದ ತಂತ್ರಜ್ಞಾನ ಬ್ಯಾಂಕ್" ಎಂದು ಗುರುತಿಸಲ್ಪಟ್ಟಿದೆ.

'ಐಪಿಪಿಬಿ'ಯನ್ನು ತಂತ್ರಜ್ಞಾನದ ಸರಳ ಮತ್ತು ಅರ್ಥಗರ್ಭಿತ ಬಳಕೆಯ ನಿಜವಾದ ಪ್ರತಿಬಿಂಬ ಎಂದು ಹೇಳಬಹುದು ಮತ್ತು ಮಿತವ್ಯಯದ ಮೂಲಕ ನಾವೀನ್ಯತೆ ಸ್ಪರ್ಷವನ್ನು ಹೊಂದಿರುವ 'ಐಪಿಪಿಬಿ',  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ತಲುಪಲು ವಿಶ್ವಾಸಾರ್ಹ ಪೋಸ್ಟ್‌ಮ್ಯಾನ್‌ನ ನೆರವಿನ ಮೂಲಕ ಪ್ರತೀ ಮನೆಯ ಬಾಗಿಲಿಗೆ ತೆರಳಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ಸರ್ವರನ್ನೂ "ಆರ್ಥಿಕ ಒಳಗೊಳ್ಳುವಿಕೆ" (Financial inclusion) ಭಾಗವಾಗಿಸುವ ಸರಕಾರದ ಉದ್ದೇಶಿತ ಗುರಿ ಸಾಧನೆಗೆ ಬೆಂಬಲವನ್ನು ಒದಗಿಸುತ್ತಿದೆ.

    ಐಪಿಪಿಬಿಯಲ್ಲಿ ನೂತನ AePS (Aadhar Enabled Payment System) ಸೇವೆ ಲಭ್ಯವಿದ್ದು ,  ತನ್ನಲ್ಲ ಶಾಖೆಗಳಲ್ಲಿ  ಈ ಸೌಲಭ್ಯ ಒದಗಿಸಿದೆ.

       AePS  ಸೇವೆಯಲ್ಲಿ ಯಾವುದೇ ಬ್ಯಾಂಕಿನ  ಆಧಾರ್ ಜೋಡಣೆಯಾದ ಖಾತೆಯಲ್ಲಿನ   ಹಣವನ್ನು ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನ ಮೂಲಕ ಅಥವಾ ಅಂಚೆ ಕಛೇರಿಯ ಯಾವುದೇ ಶಾಖೆಯಲ್ಲಿ    ಪಡೆಯಬಹುದು.  ಈ ಮೂಲಕ  'Aap Ka Bank, Aap Ke Dwar' ಎಂಬ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕಿನ ಧ್ಯೇಯ ವಾಕ್ಯ ಸಾಕಾರ ಗೊಂಡಿದೆ.  ಅದಲ್ಲದೆ  'ಡಿಜಿಟಲ್ ಇಂಡಿಯಾ' ದ  ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ.

       ಇಂದೇ ಪ್ಲೇಸ್ಟೋರ್ ನಿಂದ  IPPB App  ಡೌನ್ಲೋಡ್ ಮಾಡಿಕೊಂಡು  ಅಥವಾ ಅಂಚೆ ಕಚೇರಿಯನ್ನು  ಸಂಪರ್ಕಿಸಿ ಅಥವಾ ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನನ್ನು ಸಂಪರ್ಕಿಸಿ ಖಾತೆಯನ್ನು ತೆರೆದು  'ಬ್ಯಾಂಕಿಂಗ್' ನ  ನೂತನ ಅನುಭವವನ್ನು ಪಡೆದುಕೊಳ್ಳಿ.

Facilities of IPPB



Post a Comment

ನವೀನ ಹಳೆಯದು