ಅಕ್ಟೋಬರ್ 8 :  ಭಾರತೀಯ ವಾಯುಪಡೆ ದಿನ;  IAFಗೆ  ಈಗ 87ರ ಸಂಭ್ರಮ. 

IAF Stamp


 ಭಾರತದಲ್ಲಿ ವಾಯುಪಡೆಯನ್ನು ಬ್ರಿಟಿಷರು ಸ್ಥಾಪಿಸಿದ್ದು, 1932 ಅಕ್ಟೋಬರ್ 8 ರಂದು  ಆರಂಭಿಸಿದ್ದರು. ಆಗ ವಾಯುಪಡೆಯನ್ನು 'ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌' ಎಂದು ಕರೆಯಲಾಗುತ್ತಿತ್ತು. 1933 ಏ .1ರಂದು ಮೊದಲ ಯುದ್ಧ ವಿಮಾನ ವಾಯು ಪಡೆಗೆ ಸೇರ್ಪಡೆಯಾಗಿತ್ತು. ಸ್ವಾತಂತ್ರ್ಯದ ನಂತರ ಇದನ್ನು ಭಾರತೀಯ ವಾಯುಪಡೆ (India Air Force) ಎಂದು ಬದಲಾವಣೆ ಮಾಡಲಾಯಿತು.

ಧೇಯವಾಕ್ಯ: नभः स्पृशं दीप्तम् (Sanskrit)    'Touch the sky with glory'

       ಭಾರತೀಯ ವಾಯುಪಡೆ ಜಗತ್ತಿನ ಪ್ರಮುಖ ಶಕ್ತಿಶಾಲಿ ಸಶಸ್ತ್ರ ಪಡೆಯಾಗಿ ರೂಪುಗೊಂಡಿದೆ. ಭಾರತೀಯ ವಾಯುಪಡೆಗೆ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವಿದೆ. ಅಮೆರಿಕ, ಚೀನಾ  ಮತ್ತು ರಷ್ಯಾದ ನಂತರದ ಸ್ಥಾನ ಪಡೆದುಕೊಂಡಿರುವ  ಭಾರತೀಯ ವಾಯುಪಡೆ ಕೇವಲ ಯುದ್ಧ ಮಾತ್ರವಲ್ಲ  ಅನೇಕ ರಾಷ್ಟ್ರೀಯ ವಿಪತ್ತುಗಳಲ್ಲಿ  ಕೂಡ  ನೆರವಾಗಿದೆ. 

     ದ್ವಿತೀಯ ವಿಶ್ವ  ಯುದ್ಧ,  1965 ರ ಪಾಕಿಸ್ತಾನದೊಂದಿಗೆ ಯುದ್ಧ,  ಆಪರೇಷನ್ ವಿಜಯ್ ಆಪರೇಷನ್ ಮೇಘದೂತ, ಕಾರ್ಗಿಲ್ ಯುದ್ಧ, ಬಾಲಾಕೋಟ್ ವಾಯುದಾಳಿ ಭಾರತೀಯ ವಾಯುಪಡೆಯ ‍ ಪ್ರಮುಖ 
ಕಾರ್ಯಾಚರಣೆಗಳು.

    ಭಾರತೀಯ ವಾಯುಪಡೆಯ ಸ್ಮರಣಾರ್ಥವಾಗಿ ಅನೇಕ ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ  ಬಿಡುಗಡೆಗೊಳಿಸಿದ್ದು ಅವುಗಳನ್ನು ಈ ಕೆಳಗಿನಂತೆ ನೋಡಬಹುದು. 





ಈಗಿನ "ಏರ್ ಚೀಫ ಮಾರ್ಷಲ್" ರನ್ನು  ಕಮೆಂಟ್ ಬಾಕ್ಸ್ನಲ್ಲಿ ಹೆಸರಿಸಿ.


Post a Comment

ನವೀನ ಹಳೆಯದು