ಅಂಚೆ ಕಛೇರಿ ಉಳಿತಾಯ ಖಾತೆ (Post Office Savings Bank Account-POSB Account)


POSB(Post Office Savings Bank) Logo

 ಅಂಚೆ ಕಛೇರಿ ಉಳಿತಾಯ ಯೋಜನೆಗಳಲ್ಲಿ (Post Office Savings Schemes)  ಅಂಚೆ ಕಛೇರಿ  ಉಳಿತಾಯ ಖಾತೆ (Post Office Savings Bank Account-POSB) ಪ್ರಮುಖವಾದದು, ಬ್ಯಾಂಕ್(Bank) ನಲ್ಲಿ ಉಳಿತಾಯ ಖಾತೆ (Savings Account)  ತರೆಯುವಂತೆಯೇ ಅಂಚೆ ಕಛೇರಿಯಲ್ಲಿಯೂ ಸುಲಭವಾಗಿ ಖಾತೆಯನ್ನು ತೆರೆದು ಹಣ ಜಮೆ (Deposit) ಅಥವಾ ಹಿಂತೆಗೆಯುವ (Withdrawal) ಮಾಡಬಹುದಾಗಿದೆ. ಅಲ್ಲದೆ ಆಧುನಿಕ ಬ್ಯಾಂಕಿಂಗ್  ಸೌಲಭ್ಯಗಳಾದ ಡೆಬಿಟ್ ಕಾರ್ಡ್ (Debit Card),  ಅಂತರ್ಜಾಲ ಮತ್ತು ಮೊಬೈಲ್ ಆಧಾರಿತ  ಸೇವೆಯನ್ನು (Internet and Mobile Banking Services)  ಪಡೆದುಕೊಳ್ಳಬಹುದು. ಈ ಅಂಚೆ ಕಛೇರಿ ಉಳಿತಾಯ ಖಾತೆಯ ಸಂಪೂರ್ಣ ಮಾಹಿತಿಯನ್ನು ಈ ಮುಂದಿನಂತೆ ನೋಡೋಣ. 

ಯಾರು, ಯಾವ ಖಾತೆ ತೆರೆಬಹುದು?

    ಅಂಚೆ ಕಛೇರಿ ಉಳಿತಾಯ ಖಾತೆಯನ್ನು, 

👉 ವಯಸ್ಕರು,

       🕴ಒಬ್ಬರೇ  ಒಂಟಿಯಾಗಿ (Single), 
                         ಅಥವಾ
       👫 ಇಬ್ಬರು ಜಂಟಿಯಾಗಿ (Joint)

👉 ಮಕ್ಕಳು,

        👨‍👩‍👦 10 ವರ್ಷದೊಳಗಿನ ಮಕ್ಕಳು ಪೋಷಕರೊಂದಿಗೆ ಜಂಟಿಯಾಗಿ ( Minor Account with Guardian) ,

       👱 10 ವರ್ಷ ವಯಸ್ಸು ಮೀರಿದ ಮಕ್ಕಳು ಪೋಷಕರೊಂದಿಗೆ ಜಂಟಿಯಾಗಿ  (Minor Account with Guardian),    ಅಥವಾ  ಸ್ವತಂತ್ರವಾಗಿ ಒಬ್ಬರೇ  (Minor Account Himself/Herself)  ಖಾತೆಯನ್ನು ತೆರೆಯಬಹುದು. 


ಖಾತೆಯ ಕನಿಷ್ಟ ಮೊತ್ತ: 

ಅಂಚೆ ಉಳಿತಾಯ ಖಾತೆ ತೆರೆಯಲು ಕನಿಷ್ಟ ಮೊತ್ತ 500 ರೂ.ಗಳು  


Post a Comment