"ಜ್ಞಾನ ಪೋಸ್ಟ್" –ಅಂಚೆ ಸೇವೆಯ ಹೊಸ ಅಧ್ಯಾಯ
ಅಂಚೆ ಇಲಾಖೆಯು ಭಾರತೀಯ ಅಂಚೆ ಸೇವೆಗಳ ಅಡಿಯಲ್ಲಿ ಪ್ರಜ್ಞೆ, ಸಂಸ್ಕೃತಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಜಾಗೃತಿಗೆ ನವೀನ ಮಾರ್ಗವನ್ನು ನೀಡುವ ನಿಟ್ಟಿನಲ್ಲಿ, "ಜ್ಞಾನ ಪೋಸ್ಟ್" ಎಂಬ ಹೊಸ ಅಂಚೆ ಸೇವಾ ಉತ್ಪನ್ನವನ್ನು 2025ರ ಮೇ 1ರಿಂದ ದೇಶಾದ್ಯಾಂತ ಪ್ರಾರಂಭಿಸುತ್ತಿದೆ. ಕೊಪ್ಪಳ ಅಂಚೆ ವಿಭಾಗದಲ್ಲಿ ಈ ಸೇವೆಯನ್ನು ಜನತೆಯ ಬಳಿಗೆ ತಲುಪಿಸಲು ಸಿದ್ಧತೆ ಪೂರ್ಣಗೊಂಡಿದೆ.
ಜ್ಞಾನ ಪೋಸ್ಟ್ ಎಂಬುದು ಏನು: ಇದು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಉಪಯುಕ್ತವಾದ ಪಠ್ಯಪುಸ್ತಕಗಳು, ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ ಸಾಹಿತ್ಯವನ್ನು ಕಡಿಮೆ ದರದಲ್ಲಿ ನಂಬಲರ್ಹ ಅಂಚೆ ಮಾರ್ಗವಾಗಿ ಕಳುಹಿಸಲು ಅವಕಾಶ ಕಲ್ಪಿಸುವ ನೂತನ ವ್ಯವಸ್ಥೆಯಾಗಿದ್ದು, ಇದನ್ನು ಟ್ರ್ಯಾಕ್ ಮಾಡಬಹುದಾಗಿದೆ.
ಸೇವೆಯ ವೈಶಿಷ್ಟ್ಯತೆಗಳು:
- 300 ಗ್ರಾಂ ರಿಂದ 5 ಕೆ.ಜಿ. ವರೆಗೆ ಪ್ಯಾಕೆಟ್ಗಳನ್ನು ಕಳುಹಿಸಬಹುದು
- ಪಠ್ಯಪುಸ್ತಕಗಳು, ಶಾಸ್ತ್ರೀಯ ಸಾಹಿತ್ಯ, ಧಾರ್ಮಿಕ ಗ್ರಂಥಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಉಪಯೋಗಿ ಪುಸ್ತಕಗಳ ಕಳುಹಿಗೆ ಮಾತ್ರ ಮಾನ್ಯ
- ಪ್ರತಿ ಪ್ಯಾಕೆಟ್ ಮೇಲೆ "ಜ್ಞಾನ ಪೋಸ್ಟ್" ಎಂದು ಸ್ಪಷ್ಟವಾಗಿ ಗುರುತಿಸಲಾಗಿರಬೇಕು
- ವ್ಯಾಪಾರಿಕ ಅಥವಾ ವಾಣಿಜ್ಯ ಪತ್ರಿಕೆಗಳು, ಜಾಹೀರಾತು ಅಥವಾ ನಿಯಮಿತವಾಗಿ ಪ್ರಕಟವಾಗುವ ಮ್ಯಾಗಜಿನ್ಗಳು ಸೇರಬಾರದು
- ಸೇವೆಗೆ ಸಂಬಂಧಿಸಿದ ರಿಜಿಸ್ಟ್ರೇಶನ್, ವಿತರಣೆಯ ಪುರಾವೆ, ಮತ್ತು ವಿಮಾ ಸೇವೆಗಳನ್ನು ವಿಸ್ತಾರ ಸೇವೆಗಳಾಗಿ ಪಡೆದುಕೊಳ್ಳಬಹುದಾಗಿದೆ
ಡಾಕ ದರಗಳು (ಭಾರತದೊಳಗೆ):
- 300 ಗ್ರಾಂ ವರೆಗೆ –
₹20
- 301-500 ಗ್ರಾಂ –
₹25
- 501 ಗ್ರಾಂ–1 ಕೆ.ಜಿ. – ₹35
- 1–2 ಕೆ.ಜಿ. –
₹50
- 2–3 ಕೆ.ಜಿ. –
₹65
- 3–4 ಕೆ.ಜಿ. –
₹80
- 4–5 ಕೆ.ಜಿ. – ₹100
ಜನತೆಗೆ ಕೋರಿಕೆ:“ಜ್ಞಾನ ಪೋಸ್ಟ್” ಸೇವೆಯು ಪ್ರತಿಯೊಬ್ಬ ನಾಗರಿಕನಿಗೆ ಜ್ಞಾನವನ್ನು ತಲುಪಿಸುವ ಒಂದು ವಿಶಿಷ್ಟ ಅಂಚೆ ಮಾರ್ಗವಾಗಿದೆ. ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಕಟಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಂಡು ಸಮಾಜದ ಉನ್ನತಿಗೆ ಕೈಜೋಡಿಸಬೇಕೆಂಬ ಅಪೇಕ್ಷೆಯಿದೆ.
ಸೂಚನೆ: ಈ ಸೇವೆಯ ಮಾರ್ಗಸೂಚಿಗಳು ಹಾಗೂ ಷರತ್ತುಗಳು ಭಾರತೀಯ ಅಂಚೆ ಇಲಾಖೆ ಅಧಿಸೂಚನೆಯಡಿಯಲ್ಲಿ ಪ್ರಕಟವಾಗಿದ್ದು, ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತವೆ
ಕಾಮೆಂಟ್ ಪೋಸ್ಟ್ ಮಾಡಿ